ಬಿಎಸ್‌ವೈ ರಾಜೀನಾಮೆ ಬಳಿಕ ಛಿದ್ರವಾಯ್ತಾ ಮಿತ್ರಮಂಡಳಿ.?

ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬೇಷರತ್ ಸ್ನೇಹ ಸರ್ಕಾರವನ್ನು ಕೆಳಗಿಳಿಸಿ ಕಮಲ ಅರಳುವಂತೆ ಮಾಡಿದ್ದ ಮಿತ್ರಮಂಡಳಿ, ಇಂದು ಛಿದ್ರ ಮಂಡಳಿ ಎಂಬ ಪಟ್ಟ ಪಡೆದಿದೆ.

First Published Aug 13, 2021, 10:22 AM IST | Last Updated Aug 13, 2021, 10:22 AM IST

ಬೆಂಗಳೂರು (ಆ. 13): ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬೇಷರತ್ ಸ್ನೇಹ ಸರ್ಕಾರವನ್ನು ಕೆಳಗಿಳಿಸಿ ಕಮಲ ಅರಳುವಂತೆ ಮಾಡಿದ್ದ ಮಿತ್ರಮಂಡಳಿ, ಇಂದು ಛಿದ್ರ ಮಂಡಳಿ ಎಂಬ ಪಟ್ಟ ಪಡೆದಿದೆ. ಒಂದು ಕಡೆ ತಮಗೆ ಮಂತ್ರಿಗಿರಿ ಕೊಟ್ಟಿಲ್ಲವೆಂದು ಕೆಲವರು ರೊಚ್ಚಿಗೆದ್ದಿದ್ದರೆ, ಇನ್ನೊಂದು ಕಡೆ ನಮಗ್ಯಾಕ್ರಿ ಇಂಥ ಖಾತೆ, ಇದಕ್ಕಿಂತ ಪ್ರಬಲ ಖಾತೆ ಇರಲಿಲ್ವಾ./ ಎಂದು ಕ್ಯಾತೆ ತೆಗೆದಿದ್ದಾರೆ. ಇವರ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಸಿಎಂ ಸಾಹೇಬ್ರು ಹೈರಾಣಾಗಿದ್ದಾರೆ. 

'ಸಂಸತ್‌ನಲ್ಲಿ ಮಾತನಾಡಲು ಅವಕಾಶ ನೀಡಿಲ್ಲ'; ಜಂತರ್ ಮಂತರ್‌ನಲ್ಲಿ ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಯಡಿಯೂರಪ್ಪ ಸಿಎಂ ಆಗಿದ್ದಾಗ, ಜಾರಕಿಹೊಳಿ ಪ್ರಬಲವಾಗಿರುವವರೆಗೆ ವಲಸಿಗರು ಬಿಜೆಪಿ ಪಾಲಿಗೆ ಕಿಂಗ್ ಮೇಕರ್ಸ್ ಆಗಿದ್ದರು. ಅವರನ್ನು ಸಂಭಾಳಿಸಲು ಸರ್ಕಾರವೂ ಪ್ರಯತ್ನಿಸಿತ್ತು. ಅದರಲ್ಲೂ ಬಿಎಸ್‌ವೈ ವಲಸಿಗರ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದರು. ಬಿಎಸ್‌ವೈ ಅಧಿಕಾರದಿಂದ ಕೆಳಗಿಳಿದಾಗಿನಿಂದ ಮಿತ್ರಮಂಡಳಿಗೆ ಒಂದಿಲ್ಲೊಂದು ಆಘಾತ ಶುರುವಾಗಿದೆ. 

Video Top Stories