ವಿಜಯ ಸಂಕಲ್ಪ ಅಲ್ಲ, ವಿಜಯ ಮಹೋತ್ಸವ ಸಮಾವೇಶ' ರಣಕಹಳೆ ಮೊಳಗಿಸಿದ ನಮೋ!
ಲಕ್ಷಾಂತರ ಕಾರ್ಯಾಕರ್ತರ ನಡುವಿನಿಂದ ವೇದಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಭಾಷಣ ಮಾಡಿದರು. ಪ್ರಧಾನಿ ಮೋದಿ ಭಾಷಣ ಇಲ್ಲಿದೆ.
ದಾವಣಗೆರೆ(ಮಾ.25): ವಿಜಯ ಸಂಕಲ್ಪ ಯಾತ್ರೆ ನೋಡಿದರೆ ವಿಜಯ ಮಹೋತ್ಸವದ ರೀತಿ ಇದೆ. ಕಲಬುರಗಿಯಲ್ಲಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದಾವರಣೆಗೆರೆಯಲ್ಲಿ ಆಯೋಜಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದರು. ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ, ಈ ಯೋಜನೆ ವಿವರಗಳನ್ನು ಜನರಿಗೆ ತಲುಪಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಮೋದಿ ಭಾಷಣ ಇಲ್ಲಿದೆ.