ಸರ್ಕಾರದ ವಿರುದ್ಧ ಮತ್ತೆ ತಿರುಗಿಬಿದ್ದ ಶಾಸಕ ರಾಜು ಕಾಗೆ! ಸಚಿವರ ಕಾರ್ಯವೈಖರಿ ಬಗ್ಗೆ ಕಿಡಿ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕ ರಾಜು ಕಾಗೆ ಅವರು ಮತ್ತೆ ಸಿಡಿದೆದ್ದಿದ್ದಾರೆ. ಸಚಿವರು ತಮ್ಮ ಸಮಸ್ಯೆಯನ್ನೇ ಆಲಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಸರ್ಕಾರದ ವಿರುದ್ಧ ಶಾಸಕ ರಾಜೂ ಕಾಗೆ ಅವರು ಮತ್ತೆ ಸಿಡಿದೆದ್ದಿದ್ದಾರೆ. ತಮ್ಮದೇ ಪಕ್ಷದ ಸಚಿವರ ಬಳಿ ಮಾತನಾಡುತ್ತಿದ್ದರೆ ಅವರ ಗಮನ ಬೇರೆ ಕಡೆ ಇರುತ್ತದೆ. ನಾವು ಶಾಸಕರಾಗಿದ್ದರೂ ನಮ್ಮ ಕಡೆಗೆ ಮಂತ್ರಿಗಳ ಗಮನವೇ ಇರುವುದಿಲ್ಲ. ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವಾಗ ಅವರು ಬೇರೆಲ್ಲೋ ನೋಡಿಕೊಂಡು ಕುಳಿತಿರುತ್ತಾರೆ. ನಾವು ಕಷ್ಟಗಳನ್ನು ಹೇಳಿಕೊಂಡರೂ ಪರಿಹಾರ ಸಿಗ್ತಿಲ್ಲ ಎಂದು ಶಾಸಕ ರಾಜೂ ಕಾಗೆ ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೇಚೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸ್ಥಳೀಯ ಯಾವುದೇ ಸಮಸ್ಯೆಗಳಿದ್ದರೂ ಶಾಸಕರು ಹಂಚಿಕೊಳ್ಳುವುದಕ್ಕೆ ವಾರಕ್ಕೊಮ್ಮೆ ಶಾಸಕರೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ಸಚಿವರು ಶಾಸಕರ ನಡುವಿನ ಮುಸುಕಿನ ಗುದ್ದಾಟ ಮಾತ್ರ ಸರಿ ಹೋಗುತ್ತಿಲ್ಲ.

Related Video