ಮೈತ್ರಿ ಪಾದಯಾತ್ರೆಗೆ ಬ್ರೇಕ್ ಹಾಕಿದ ಕೇಂದ್ರ ಸಚಿವ HDK : ಚುನಾವಣಾ ಮೈತ್ರಿ ಬೇರೆ ರಾಜಕೀಯ ಬೇರೆ ಎಂದ ದಳಪತಿ!

ರಾಜ್ಯ ಸರ್ಕಾರದ ಹಗರಣದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷ ಪಾದಯಾತ್ರೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಡೆ ಒಡ್ಡಿದ್ದಾರೆ.

First Published Aug 1, 2024, 3:27 PM IST | Last Updated Aug 1, 2024, 3:27 PM IST

ರಾಜ್ಯ ಸರ್ಕಾರದ ಹಗರಣದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷ ಪಾದಯಾತ್ರೆ ಹಮ್ಮಿಕೊಂಡಿತ್ತು. ಕೇವಲ ಎರಡು ದಿನಗಳ ಹಿಂದೆ ಹೆಚ್ಡಿಕೆ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ಮತ್ತು ಪಾದಯಾತ್ರೆ ಮಾಡುವುದಾಗಿ ಗುಡುಗಿದ್ದರು. ಆದ್ರೆ ಇಂದು ಇದ್ದಕ್ಕಿದ್ದಂತೆ ಮೈತ್ರಿ ಪಾದಯಾತ್ರೆ ಕುರಿತು ಎಚ್ಡಿಕೆ ಉಲ್ಟಾ ಹೊಡೆದಿದ್ದಾರೆ. ಒಂದು ವೇಳೆ ಎರಡೂ ಪಕ್ಷದವರು ಒಟ್ಟಾಗಿ ಪಾದಯಾತ್ರೆ ನಡೆಸಿದ್ದೇ ಆದರೆ, ಯಾವ ಪಕ್ಷಕ್ಕೆ ಹೆಚ್ಚು ಲಾಭವಾಗುತ್ತಿತ್ತು? ಮೈತ್ರಿ ಪಾದಯಾತ್ರೆಗೆ ಜೆಡಿಎಸ್ ಪಕ್ಷವನ್ನು ಬಿಜೆಪಿ ಕಡೆಗಣಿಸಿದ್ದು ಏಕೆ? ಎನ್ನುವ ಮಾಹಿತಿ ಇಲ್ಲಿದೆ ನೋಡಿ..

ಒಂದು ವೇಳೆ ಮತ್ತೆ ನಾಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಮನಸ್ಸು ಬದಲಿಸಿಕೊಂಡರೆ ಅಥವಾ ಬಿಜೆಪಿ ಮುಖಂಡರು ಕೋಪ ಮಾಡಿಕೊಂಡಿರುವ ಎಚ್ಡಿಕೆಗೆ ಸಮಾಧಾನ ಮಾಡಿ ಪಾದಯಾತ್ರೆಗೆ ಒಪ್ಪಸಿದ್ದೇ ಆದಲ್ಲಿ. ಈ ಮೈತ್ರಿ ಪಾದಯಾತ್ರೆಯಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಮೈಲೇಜ್ ಸಿಗಲಿದೆ ಅನ್ನೋ ಲೆಕ್ಕಾಚಾರ ಆರಂಭವಾಗಿದೆ. ಹಾಗಾಗಿ, ತಮ್ಮ ಪಕ್ಷದವರಿಂದಲೇ ಪಾದಯಾತ್ರೆಗೆ ವಿರೋಧ  ಇದ್ದ ಕಾರಣದಿಂದಲೇ ಪಾದಯಾತ್ರೆಗೆ ಬಿಜೆಪಿ ಜೆಡಿಎಸ್ ಪಕ್ಷವನ್ನು ಕಡೆಗಣಿಸಿದೆ ಮಾಹಿತಿಯೂ ಕೇಳಿ ಬರುತ್ತಿದೆ.