ನನಗೂ ಸಿಎಂ ಆಗೋ ಆಸೆಯಿದೆ, ಶಾಸಕರ ಬೆಂಬಲ ಸಿಗುತ್ತಾ ನೋಡೋಣ- ಎಂ.ಬಿ. ಪಾಟೀಲ್

ನಾನು ಕೂಡ ಸಿಎಂ ಆಗಬೇಕೆಂದುಕೊಂಡಿದ್ದೇನೆ. ಆದರೆ, ರಾಜ್ಯದ ಶಾಸಕರ ಬೆಂಬಲ ಬೇಕಲ್ಲವೇ ಎಂದು ಶಾಸಕ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ದೆಹಲಿ (ಮೇ 15): ದೆಹಲಿಗೆ ತೆರಳಿರುವ ಶಾಸಕ ಎಂ.ಬಿ. ಪಾಟೀಲ್‌, ನಿನ್ನೆ ಜಿತೇಂದ್ರ ಸಿಂಗ್‌, ಸುಶೀಲ್‌ ಕುಮಾರ್‌ ಶಿಂಧೆ ಶಾಸಕರ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಹೈಕಮಾಂಡ್‌ ಮುಂದಿಟ್ಟ ನಂತರ ಸಿಎಂ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಾನು ಕೂಡ ಸಿಎಂ ಆಗಬೇಕೆಂದುಕೊಂಡಿದ್ದೇನೆ. ಆದರೆ, ರಾಜ್ಯದ ಶಾಸಕರ ಬೆಂಬಲ ಬೇಕಲ್ಲವೇ ಎಂದು ಶಾಸಕ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.
ರಾಜ್ಯದಲ್ಲಿ 56ರಲ್ಲಿ 34 ಮಂದಿ ಲಿಂಗಾಯತ ನಾಯಕರು ಆರಿಸಿ ಬಂದಿದ್ದೇವೆ. ನನಗೂ ಮುಖ್ಯಮಂತ್ರಿ ಆಸೆಯಿದೆ.ಶಾಸಕರ ಅಭಿಪ್ರಾಯ ಯಾರಿಗೆ ಬರುತ್ತದೆಯೋ ಅವರು ಮುಖ್ಯಮಂತ್ರಿ ಆಗುತ್ತಾರೆ. ಈಗ ಶಾಸಕಾಂಗ ಸಭೆಯಲ್ಲಿ ಯಾವ ತೀರ್ಮಾನ ಮಾಡಿದ್ದಾರೆ ಎಂದು ನನ್ನ ಬಳಿ ಮಾಹಿತಿಯಿಲ್ಲ. ವೀಕ್ಷಕರ ಬಳಿಯಿದ್ದು, ಅದನ್ನು ಹೈಕಮಾಂಡ್‌ ಬಳಿ ಹೇಳುತ್ತಾರೆ. ನಾವು ಒಗ್ಗಟ್ಟಾಗಿದ್ದೇವೆ ಎಲ್ಲಿಯೂ ಬಣ್ಣ ಬಣ್ಣದ ರಾಜಕೀಯ ಮಾಡುವುದಿಲ್ಲ. ಯಾವುದೇ ಬಣ ಕಿತ್ತಾಟ ಇಲ್ಲ, ಶಾಸಕರ ಮತ ಎಣಿಕೆ ಆಗಿಲ್ಲ. ಹೈಕಮಾಂಡ್‌ ನಾಯಕರು ಸಿಎಂ ಅಭ್ಯರ್ಥಿಗಳ ಮುಂದೆ ಮತಗಳನ್ನು ಎಣಿಕೆ ಮಾಡಲಿದ್ದಾರೆ ಎಂದು ಹೇಳಿದರು.

Related Video