ಮೀಸಲಾತಿ ಅಪಾಯದಿಂದ ಸರ್ಕಾರ ಪಾರು, ಸಮುದಾಯಕ್ಕೆ ಕೇಳಿದ್ದು ಕೊಡಲಿಲ್ಲ ಅನ್ನೋ ಬೇಜಾರು!

ಹೊಸ ವರ್ಷಕ್ಕೆ ಗುಡ್ ನ್ಯೂಸ್ ಮೀಸಲಾತಿಗೆ ರಾಜ್ಯ ಸರ್ಕಾರ ಒಪ್ಪಿಗೆ, ಕಳಸಾ ಬಂಡೂರಿ ಡಿಪಿಆರ್‌ಗೆ ಕೇಂದ್ರ ಗ್ರೀನ್ ಸಿಗ್ನಲ್ ಗಿಮಿಕ್ ಎಂದ ಕಾಂಗ್ರೆಸ್, ಮೀಸಲಾತಿ ಘೋಷಿಸಿದರೂ ಗೊಂದಲ ಬಗೆಹರಿದಿಲ್ಲ, ಹೊಸ ವರ್ಷಕ್ಕೆ ಕೊರೋನಾ ಆತಂಕ ಸೇರಿದಂತೆ ಇಂದಿನ ಇಡೀ ದಿನದ ಕಂಪ್ಲೀಟ್ ಸುದ್ದಿ ವಿವರ ಇಲ್ಲಿವೆ.

First Published Dec 29, 2022, 10:43 PM IST | Last Updated Dec 29, 2022, 10:52 PM IST

ಪಂಚಮಸಾಲಿ, ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಗಳಿಗೆ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಒಪ್ಪಿದೆ. ಇದಕ್ಕಾಗಿ ಎರಡು ಹೊಸ ಪ್ರವರ್ಗಗಳನ್ನು ಸೃಷ್ಟಿಸಲಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡಲಾಗಿದೆ.  ಒಕ್ಕಲಿಗ ಸಮುದಾಯಕ್ಕೆ 2ಸಿ ಅಡಿಯಲ್ಲಿ ಮೀಸಲಾತಿ ನೀಡಲು ಸಚಿವ ಸಂಪುಟಕ್ಕೆ ಒಪ್ಪಿಗೆ ನೀಡಿದೆ. ಲಿಂಗಾಯಿತ ಸಮುದಾಯಕ್ಕೆ 3ಬಿ ಯಲ್ಲಿರುವ ಮೀಸಲಾತಿಯನ್ನು 2ಡಿ ಅಡಿಯಲ್ಲಿ ನೀಡಲು ಒಪ್ಪಿಗೆ ಸೂಚಿಸಿದೆ. ಈ ಮೂಲಕ ಉಗ್ರ ಹೋರಾಟದ ಬಿಸಿಯಿಂದ ಸರ್ಕಾರ ಪಾರಾಗಿದೆ. ಆದರೆ ಪಂಚಮಸಾಲಿ ಸಮುದಾಯ 2ಎ ಮೀಸಲಾತಿ ಬೇಕು ಎಂದು ಹೋರಾಟ ನಡೆಸಿ ಇದೀಗ 2ಡಿ ಮೀಸಲಾತಿ ಪಡೆದಿದೆ. ಇದು ಸಮುದಾಯದಲ್ಲಿ ಅತೃಪ್ತಿ ಮೂಡಿಸಿದೆ.