ಕೋಲಾರ ಅಖಾಡಕ್ಕೆ ಟಗರು ಎಂಟ್ರಿ: ಚಿನ್ನದ ನಾಡಿನಲ್ಲಿ ಮನೆ ಮಾಡಿದ ಸಿದ್ದರಾಮಯ್ಯ

ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿದ್ದು, ಚಿನ್ನದ ಕೋಟೆಯಲ್ಲಿ ಸಿದ್ದು ಮನೆ ಹೇಗಿದೆ ಗೊತ್ತಾ? ಇಲ್ಲಿದೆ ಡಿಟೇಲ್ಸ್.
 

Share this Video
  • FB
  • Linkdin
  • Whatsapp

ಕೋಲಾರದ ಕೋಗಿನಹಳ್ಳಿ ಗ್ರಾಮದಲ್ಲಿ ಸಿದ್ದರಾಮಯ್ಯ ಮನೆ ಮಾಡಿದ್ದು, ಐಷಾರಾಮಿ ಮನೆಯಲ್ಲಿ ಹಾಲ್‌, ಎರಡು ರೂಂ, ಡೈನಿಂಗ್‌ ಹಾಲ್‌ ದೇವರ ಮನೆ ಹಾಗೂ ಓಪನ್‌ ಕಿಚನ್‌ ಸೇರಿ ಹಲವು ಸೌಕರ್ಯಗಳು ಇವೆ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಹಿನ್ನೆಲೆಯಲ್ಲಿ ವಾಸ್ತು ಪ್ರಕಾರ ಸಿದ್ದು ಮನೆ ಫಿಕ್ಸ್‌ ಮಾಡಿದ್ದಾರೆ ಯತೀಂದ್ರ ಸಿದ್ದರಾಮಯ್ಯ. ವಾಸಕ್ಕಾಗಿ ಪೂರ್ವ ದಿಕ್ಕಿನ ಬಾಗಿಲಿರುವ ಮನೆಯನ್ನು ಫಿಕ್ಸ್‌ ಮಾಡಿದ್ದು, 15 ದಿನಗಳಿಂದ ನಾಯಕರು ಮನೆ ಹುಡುಕಾಟ ನಡೆಸುತ್ತಿದ್ದರು. ಸಿದ್ದರಾಮಯ್ಯ ಅಭಿಮಾನಿ ಶಂಕರ್‌ಗೆ ಸೇರಿದ ಮನೆ ಇದಾಗಿದ್ದು, ಒಂದು ಎಕರೆ ತೋಟದಲ್ಲಿ ಭವ್ಯ ಬಂಗಲೆ ಇದೆ‌.

Related Video