Follow The Leader: ನನಗೆ ಪ್ರೋತ್ಸಾಹ ಕೊಟ್ಟವರು ದೇಶದ ಬಡವರು: ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿಯ ಜೆ.ಪಿ ನಗರ  ನಿವಾಸದಲ್ಲಿ ಒಂದು ದಿನವಿಡೀ ಸುವರ್ಣ ನ್ಯೂಸ್ ಇದ್ದು, ಎಲ್ಲಾ ಅಪ್ಡೇಟ್ ಕಲೆ ಹಾಕಿದೆ.

First Published Feb 13, 2023, 2:44 PM IST | Last Updated Feb 13, 2023, 2:44 PM IST

ರಚನಾತ್ಮಕವಾಗಿ ಜೆಡಿಸ್‌ ಕಣಕ್ಕಿಳಿದೆ. ನನಗೆ ಪ್ರೋತ್ಸಾಹ ಕೊಟ್ಟವರು ಈ ದೇಶದ ಬಡವರು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನನ್ನ ಮುಂದೆ ಪ್ರತಿನಿತ್ಯ ಬರುವ ಬಡವರು ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಕೇಳಿಕೊಳ್ಳುತ್ತಾರೆ. ಶಿಕ್ಷಣ ಕ್ಷೇತ್ರ, ಕುಟುಂಬದ ಪರಿಸ್ಥಿತಿ ಆರೋಗ್ಯ ಸಮಸ್ಯೆ, ರೈತರು ಸಾಲಗಾರರಾಗಿರುವ ಪರಿಸ್ಥಿತಿ ಹಾಗೂ ಯುವಕರ ಉದ್ಯೊಗ ಹಲವು ಸಮಸ್ಯೆ ಇಟ್ಟುಕೊಂಡು ನನ್ನ ಬಳಿ ಪರಿಹಾರಕ್ಕೆ ಬರುತ್ತಾರೆ ಎಂದು ಅವರು ಹೇಳಿದರು. ಇನ್ನು ಜೆಡಿಎಸ್ ಪಕ್ಷದಿಂದ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಹೇಗೆ ನಡೆಯುತ್ತದೆ. ಈ ಸಂದರ್ಭದಲ್ಲಿ ಏನೆಲ್ಲಾ ಆಗುತ್ತೆ, ಯಾರನ್ನೆಲ್ಲ ಮೀಟ್‌ ಮಾಡುತ್ತಾರೆ. ಯಾವ ರೀತಿ ಪ್ರಚಾರ ಕಾರ್ಯ ಇರುತ್ತೆ ಎಂಬ ಕುರಿತು ಮಾಹಿತಿ ಕಲೆ ಹಾಕಲಾಗಿದೆ. ಯಾವ ವಿಚಾರಗಳನ್ನು ಜನರಿಗೆ ಹೆಚ್‌.ಡಿ ಕುಮಾರಸ್ವಾಮಿ ಹೇಳುತ್ತಾರೆ. ಇದರ ಜೊತೆಗೆ ಇರುವಂತ ಕೆಲವು ಭಿನ್ನಾಭಿಪ್ರಾಯಗಳು ಬಿಜೆಪಿ ಹಾಗೂ ಕಾಂಗ್ರೆಸ್‌ ಬಗ್ಗೆ ಕುಮಾರಸ್ವಾಮಿಯವರು ಮಾತನಾಡಿದ್ದಾರೆ.

Basavaraj Bommai: ರಾಜ್ಯದಲ್ಲಿ ಹೊಸ ಏರೋಸ್ಪೇಸ್‌ ನೀತಿ ಘೋಷಣೆ: ಸಿಎಂ ಬೊಮ್ಮಾಯಿ