ಬಸವಣ್ಣನ ವಿಚಾರಧಾರೆ ಮೇಲೆ ಆರ್‌ಎಸ್‌ಎಸ್ ಬಿಜೆಪಿ ಆಕ್ರಮಣ, ಬೀದರ್‌ನಲ್ಲಿ ರಾಹುಲ್ ವಾಗ್ದಾಳಿ!

ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ಬೀದರ್‌ನಲ್ಲಿ ಬಾಲ್ಕಿಯಲ್ಲಿ ಆಯೋಜಿಸಿದ ಜನಕ್ರಾಂತಿ ರ್ಯಾಲಿಯಲ್ಲಿ ಪಾಲ್ಗೊಂಡು, ಈಶ್ವರ್ ಖಂಡ್ರೆ ಪರ ಮತಯಾಚನೆ ಮಾಡಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ರಾಹುಲ್ ಭಾಷಣದ ಇಲ್ಲಿದೆ.

First Published Apr 17, 2023, 5:31 PM IST | Last Updated Apr 17, 2023, 5:31 PM IST

ಬೀದರ್(ಏ.17): ಕರ್ನಾಟಕ ವಿಧಾಸಭಾ ಚುನಾವಣೆ ಗೆಲ್ಲಲು ಟೊಂಕ ಕಟ್ಟಿನಿಂತಿರುವ ಕಾಂಗ್ರೆಸ್ ಭರ್ಜರಿ ಸಮಾವೇಶ ಆಯೋಜಿಸಿ ಮತಕ್ರೋಢಿಕರಣಕ್ಕೆ ಮುಂದಾಗಿದೆ. ಇಂದು ಬೀದರ್‌ನ ಬಾಲ್ಕಿಯಲ್ಲಿ ಜನಕ್ರಾಂತಿ ರ್ಯಾಲಿ ಆಯೋಜಿಸಲಾಗಿತ್ತು. ಈ ರ್ಯಾಲಿಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಈಶ್ವರ್ ಖಂಡ್ರೆ ಪರ ಮತಯಾಚನೆ ಮಾಡಿದ್ದಾರೆ. ಇದೇ ವೇಳೆ ದೇಶದಲ್ಲಿ ಲೋಕತಂತ್ರ ಕುರಿತು ಮೊದಲ ಮಾತನಾಡಿದ್ದು ಬಸವಣ್ಣ. ಆದರೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬಸವಣ್ಣನ ವಿಚಾರಧಾರೆ ಮೇಲೆ ಆಕ್ರಮಣ ಮಾಡಿದ್ದಾರೆ.  ಭಾರತದ ಬಡವರಿಂದ ಹಣ ಕಿತ್ತುಕೊಂಡು ಉದ್ಯಮಿಗಳಿಗೆ ಬಿಜೆಪಿ ನೀಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.