Asianet Suvarna News Asianet Suvarna News

ಬ್ರಾಹ್ಮಣ ಹೇಳಿಕೆಗೆ ಬದ್ಧ, ಕುಮಾರಸ್ವಾಮಿ ಮಾತಿಗೆ ಕರ್ನಾಟಕದಲ್ಲಿ ಯುದ್ಧ!

ಹೆಚ್‌ಡಿಕೆ ಬ್ರಾಹ್ಮಣ ಹೇಳಿಕೆ, ಪೇಜಾವರ ಶ್ರೀ, ಸುಭುದೇಂದ್ರ ತೀರ್ಥರ ಖಂಡನೆ,  ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಇದರ ಬೆನ್ನಲ್ಲೇ ತನ್ನ ಹೇಳಿಕೆಗೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಇದೀಗ ಜಾತಿ ಹೋರಾಟ ಶುರುವಾಗಿದೆ. ಇಂದಿನ ಇಡೀ ದಿನ ಸುದ್ದಿಯ ಕಂಪ್ಲೀಟ್ ಪ್ಯಾಕೇಜ್ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಬ್ರಾಹ್ಮಣ ಹೇಳಿಕೆಯಿಂದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಗೆ ಸಂಕಷ್ಟ ತಂದೊಡ್ಡಿದೆ. ಇಂದು ಸುದ್ದಿಗೋಷ್ಠಿ ನಡೆಸಿ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ತಮ್ಮ ಮಾತಿಗೆ ಬದ್ಧ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಆದರೆ ಕುಮಾರಸ್ವಾಮಿ ಹೇಳಿಗೆ ಕರ್ನಾಟಕ ಎಲ್ಲೆಡೆಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.  ಹೆಚ್‌ಡಿ ಕುಮಾರಸ್ವಾಮಿ ಅವರ ಬ್ರಾಹ್ಮಣ ಹೇಳಿಕೆ ತಿರುಗುಬಾಣವಾಗಿದೆ. ಎಲ್ಲೆಡೆಗಳಿಂದ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಪೇಜಾವರ ಶ್ರೀಗಳು, ಸುಭುದೇಂದ್ರ ತೀರ್ಥರು ಹೆಚ್‌ಡಿಕೆ ಖಂಡಿಸಿದ್ದಾರೆ. ಇತ್ತ ಬ್ರಾಹ್ಮಣ ಸಮುದಾಯದ ಅಧ್ಯಕ್ಷರು, ಹಿರಿಯ ವಕೀಲರು ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದ್ದಾರೆ. ಇದೀಗ ಹೆಚ್‌ಡಿಕೆಗೆ ಅತ್ತ ನುಂಗಲೂ ಆಗದೇ ಇತ್ತ ಉಗಳುಲೂ ಆಗದೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.ಹೆಚ್‌ಡಿ ಕುಮಾರಸ್ವಾಮಿ ಬ್ರಾಹ್ಮಣ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಯಾವುದೇ ಸ್ಥಾನ ಅಲಂಕರಿಸುವ ಅವಕಾಶವಿದೆ. ಈ ಅವಕಾಶ ಜೆಡಿಎಸ್‌ನಲ್ಲಿ ಇದೆಯಾ? ಜಾತಿಯನ್ನು ಅವಮಾನಿಸುವ ಕುಮಾರಸ್ವಾಮಿ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ.