ಆರ್ ಅಶೋಕ್‌ಗೆ ಕಾಂಗ್ರೆಸ್ ಡಿಚ್ಚಿ, ಪದ್ಮನಾಭನಗರದಿಂದ ಡಿಕೆ ಸುರೇಶ್ ಅಖಾಡಕ್ಕಿಳಿಸಲು ನಿರ್ಧಾರ!

ಕನಕಪುರದಲ್ಲಿ ಡಿಕೆ ಶಿವಕುಮಾರ್‌ಗೆ ಠಕ್ಕರ್ ನೀಡಿದ ಬಿಜೆಪಿಗೆ ಇದೀಗ ಕಾಂಗ್ರೆಸ್ ತಿರುಗೇಟು ನೀಡಲು ಮುಂದಾಗಿದೆ. ಇದೀಗ ಆರ್ ಅಶೋಕ್ ಅವರ ಪದ್ಮನಾಭನಗರದಿಂದ ಕಾಂಗ್ರೆಸ್ ಡಿಕೆ ಸುರೇಶ್ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಏ.19): ಕರ್ನಾಟಕ ವಿಧಾನಸಭಾ ಚುನಾವಣೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಇಷ್ಟು ದಿನ ಇದ್ದ ಹೊಂದಾಣಿಕೆ ರಾಜಕೀಯಕ್ಕೆ ಬ್ರೇಕ್ ಹಾಕಲು ಕೇಂದ್ರ ಬಿಜೆಪಿ ನಾಯಕರು ಮುಂದಾಗಿದ್ದರೆ, ಇದು ರಾಜ್ಯ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆರ್ ಅಶೋಕ್‌ಗೆ ಎರಡು ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಡಿಕೆ ಶಿವಕುಮಾರ್ ವಿರುದ್ಧ ಕನಕಪುರದಿಂದ ಅಶೋಕ್ ಸ್ಪರ್ಧಿಸುತ್ತಿದ್ದಾರೆ. ಇದೀಗ ಅಶೋಕ್‌ಗೆ ಠಕ್ಕರ್ ನೀಡಲು ಡಿಕೆ ಶಿವಕುಮಾರ್ ಭರ್ಜರಿ ಪ್ಲಾನ್ ಮಾಡಿದ್ದಾರೆ. ಅಶೋಕ್ ಮತ್ತೊಂದು ಕ್ಷೇತ್ರ ಪದ್ಮನಾಭನಗರದಿಂದ ಡಿಕೆ ಸುರೇಶ್ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

Related Video