ಬಿಜೆಪಿ ಪಾಳಯದಲ್ಲಿ ಕನಕಪುರದ ಬಂಡೆ ಡಿ.ಕೆ. ಮಾಡೆಲ್ ರಾಜಕಾರಣದ ಚರ್ಚೆ?
ಕಮಲ ಪಾಳೆಯದಲ್ಲಿ ಡಿಕೆ ಮಾಡೆಲ್ ಪಾಲಿಟಿಕ್ಸ್ ಚರ್ಚೆಯಲ್ಲಿದೆ. ಭಿನ್ನಮತದ ಬೆಂಕಿಗೆ ಡಿಕೆ ಮಾದರಿಯೇ ಮದ್ದು ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಬಿಜೆಪಿ ಆಂತರಿಕ ಭಿನ್ನಮತಕ್ಕೆ ಇದು ಪರಿಹಾರವಾಗುವುದೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕಮಲ ಕಲಹದ ಅಖಾಡದಲ್ಲಿ 'ಡಿಕೆ ಮಾಡೆಲ್'ನದ್ದೇ ಸುದ್ದಿ. ಕಮಲ ಸೈನ್ಯದಲ್ಲಿ ಕೈ ಸೇನಾಪತಿ ಸದ್ದು ಮಾಡುತ್ತಿರುವುದರ ಗುಟ್ಟೇನು ಎಂಬುದು ಇಲ್ಲಿದೆ ನೋಡಿ. ಶತ್ರುವೇ ಮಿತ್ರ ಎಂಬ ಡಿಕೆ ಹೊಸ ತಂತ್ರವನ್ನು ನೋಡಿದ ಬಿಜೆಪಿ ಬೆರಗುಗಣ್ಣಿಂದ ನೋಡುತ್ತಿದೆ.
ಹೌದು, ಬಿಜೆಪಿ ಪಾಳೆಯದಲ್ಲಿ ಚರ್ಚೆಯಾಗ್ತಿದ್ಯಂತೆ ಡಿಕೆ ಮಾಡೆಲ್ ಪಾಲಿಟಿಕ್ಸ್. ಕದಡಿದ ಕಮಲ ಕೋಟೆಗೆ ಬೇಕಿದ್ಯಂತೆ ಬಂಡೆ ಮಾದರಿ ರಾಜಕಾರಣ. ಡಿಸಿಎಂ ರಾಜಕೀಯ ಪಟ್ಟುಗಳಿಗೆ ಕೇಸರಿಕಲಿಗಳೇ ಕ್ಲೀನ್ ಬೌಲ್ಡ್ ಆಗಿದ್ದಾರೆ. ನಮ್ಗೆ ಬೇಕಿರೋದು ಇದೇ ರಾಜನೀತಿ, ಅದೇ ರಣತಂತ್ರ ಅಂದ್ರಂತೆ ಕಮಲವೀರರು. ಡಿಕೆ ಶಿವಕುಮಾರ್ ಅವ್ರ ರಾಜಕೀಯ ಪಟ್ಟುಗಳ ಬಗ್ಗೆ, ಅವ್ರ ರಾಜಕೀಯ ಚರಿತ್ರೆ ಬಗ್ಗೆ ದೊಡ್ಡ ಕಥೆಯೇ ಇದೆ. ಒಡೆದ ಮನೆಯಾಗಿರೋ ಬಿಜೆಪಿಯಲ್ಲೀಗ ಡಿಕೆ ರಾಜಕೀಯ ಪಟ್ಟು, ರಾಜಕೀಯ ತಂತ್ರಗಳ ಬಗ್ಗೆಯೇ ಮಾತು. ನಮ್ಗೆ ಬೇಕಿರೋದು ಡಿಕೆ ಮಾಡೆಲ್ ಪಾಲಿಟಿಕ್ಸ್ ಅಂತ ಬಿಜೆಪಿ ನಾಯಕರು ಮಾತಾಡಿಕೊಳ್ತಿದದಾರಂತೆ.
ಹಾಗಾದ್ರೆ ಡಿಕೆ ಮಾಡೆಲ್ ಪಾಲಿಟಿಕ್ಸನ್ನು ಬಿಜೆಪಿ ನಾಯಕರು ಅನುಸರಿಸಿದ್ರೆ, ಭಿನ್ನಮತದ ಬೆಂಕಿ ಆರುತ್ತಾ..? ನಾನಾ ನೀನಾ ಅಂತ ಪರಸ್ಪರ ತೊಡೆ ತಟ್ಟಿ ನಿಂತಿರೋ ಕೇಸರಿ ಕಲಿಗಳು ಇಂಥದ್ದಕ್ಕೆ ರೆಡಿ ಇದ್ದಾರಾ..? ಇಲ್ವೇ ಇಲ್ಲ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಬೆಳಗಾವಿ ಅಧಿವೇಶನದಲ್ಲೇ ಸಿಕ್ಕಿ ಬಿಟ್ಟಿದೆ. ಡಿಕೆ ಮಾಡೆಲ್ ಪಾಲಿಟಿಕ್ಸ್ ಬಗ್ಗೆ ಬಿಜೆಪಿಯಲ್ಲಿ ಚರ್ಚೆಯಾಗ್ತಿರೋದು ನಿಜ.. ಬಿಜೆಪಿಯಲ್ಲಿ ಭಿನ್ನಮತದ ಬೆಂಕಿ ಹೊತ್ತಿಸಿರೋರು ಡಿಕೆ ಮಾಡೆಲನ್ನು ಅನುಸರಿಸಿದ್ರೆ, ಬೆಂಕಿ ಆರತ್ತೆ ಅಂತಿರೋದೂ ನಿಜ.. ಆದ್ರೆ ನಾನಾ ನೀನಾ ಅಂತ ತೊಡೆ ತಟ್ಟಿ ನಿಂತಿರೋರು ಮಾತ್ರ ಇದಕ್ಕೆಲ್ಲಾ ರೆಡಿ ಇಲ್ಲ. ಅವ್ರ ಮಧ್ಯೆ ಮತ್ತದೇ ಅಂತರ್ಯುದ್ಧ, ಕೋಲ್ಡ್ ವಾರ್.