2025ರಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವ ಕನಸು ನನಸಾಗುತ್ತಾ?
2025ರಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ. ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಕನಸು ನನಸಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಕಳೆದ ವರ್ಷ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಅಂತರ್ಯುದ್ಧ ಶುರುವಾದಾಗ ದೆಹಲಿಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ರಹಸ್ಯ ಸಭೆಯೊಂದು ನಡೆದಿತ್ತು. ಆ ಸಭೆಯಲ್ಲಿದ್ದವರು ಐದೇ ಐದು ಮಂದಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ, ಎಐಸಿಸಿ ಜನರಲ್ ಸೆಕ್ರೆಟರಿ ಕೆ.ಸಿ ವೇಣುಗೋಪಾಲ್, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್. ಈ ಐದು ಮಂದಿ ಇದ್ದ ಸಭೆಯಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದ ನಡೆದಿದೆ ಅಂತ ಡಿಕೆ ಶಿವಕುಮಾರ್ ಅವ್ರ ಬಣದವರು ಹೇಳ್ತಾರೆ. ಒಪ್ಪಂದ ಏನಂದ್ರೆ, ಎರಡೂವರೆ ವರ್ಷಗಳ ನಂತ್ರ ಮುಖ್ಯಮಂತ್ರಿ ಕುರ್ಚಿಯನ್ನು ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಅವ್ರಿಗೆ ಬಿಟ್ಟು ಕೊಡ್ಬೇಕು ಅನ್ನೋದು. ಹಾಗಾದ್ರೆ ಡಿಕೆ ಶಿವಕುಮಾರ್ ಅವ್ರ ರಾಜಕೀಯ ಜೀವನದ ಅತೀ ದೊಡ್ಡ ಕನಸು 2025ರಲ್ಲಿ ಈಡೇರುತ್ತಾ..? ಎಂಬುದನ್ನು ಕಾದು ನೋಡಬೇಕಿದೆ..
ರಾಜ್ಯದ ಇಬ್ಬರು ದೊಡ್ಡ ನಾಯಕರ ಪಾಲಿಗೆ 2025 ತುಂಬಾನೇ ಮಹತ್ವದ ವರ್ಷ. ಒಬ್ರು ಮುಖ್ಯಮಂತ್ರಿ ಸಿದ್ದರಾಮಯ್ಯ, ಇನ್ನೊಬ್ರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಡಿಕೆಶಿ ಅವ್ರ ಅತೀ ದೊಡ್ಡ ರಾಜಕೀಯ ಮಹತ್ವಾಕಾಂಕ್ಷೆ 2025ರಲ್ಲಿ ಈಡೇರುತ್ತಾ..? ಅದನ್ನು ಈಡೇರಿಸಿಕೊಳ್ಳೋದಕ್ಕೆ ತೆರೆಮರೆಯಲ್ಲಿ ಸಿದ್ಧತೆಗಳಂತೂ ನಡೀತಾ ಇವೆ. ಮತ್ತೊಂದ್ಕಡೆ ಅಗ್ನಿಪಂಜರದಲ್ಲಿರೋ ಮುಖ್ಯಮಂತ್ರಿ ಸಿದ್ದರಾಮಯ್ಯ. ಒಂದ್ಕಡೆ ಅಗ್ನಿಪಂಜರ, ಮತ್ತೊಂದ್ಕಡೆ ಅದೊಂದು ಚಾಲೆಂಜ್.. 2025ರಲ್ಲಿ ಸಿದ್ದರಾಮಯ್ಯನವರಿಗೆ ಮತ್ತೊಂದು ದೊಡ್ಡ ಸವಾಲು ಎದುರಾಗಲಿದೆ..