ಸೈನಿಕ ಬಲಕ್ಕಾಗಿ ಡಿಕೆ ಹೆಣೆದದ್ದು ಅದೆಂಥಾ ವ್ಯೂಹ? ಕಮಲದಳ ಕಟ್ಟಾಳುಗಳನ್ನು ಸೆಳೆಯುತ್ತಿದ್ದಾರಾ ಡಿಸಿಎಂ?

ಸಿಂಹಾಸನದ ದಾಂಗುಡಿ ಇಡ್ತಾ ಇರೋ ದಂಡನಾಯಕ ದಂಡು ಕಟ್ಟಲು ಮುಂದಾಗಿದ್ದಾರೆ. ಅದ್ರ ಫಲಿತಾಂಶವೇ ಆಪರೇಷನ್ ಆಟ. ಕಮಲದಳ ನಾಯಕರನ್ನು ಸೆಳೆಯುವ ಪ್ರಯತ್ನ ತೆರೆಮರೆಯಲ್ಲಿ ಆರಂಭವಾಗಿದೆ.ಸ್ವತಃ ಜೆಡಿಎಸ್ ಶಾಸಕರೇ ಈ ಗುಟ್ಟು ರಟ್ಟು ಮಾಡಿದ್ದಾರೆ. ಹಾಗಾದ್ರೆ ದಂಡು ಕಟ್ಟಲು ಮುಂದಾಗಿರೋ ಡಿಕೆ ಈ ಆಟದಲ್ಲಿ ಗೆಲ್ತಾರಾ?

First Published Jan 16, 2025, 3:08 PM IST | Last Updated Jan 16, 2025, 3:09 PM IST

ಬೆಂಗಳೂರು: ಪಟ್ಟದಾಟ ಪಗಡೆಯಾಟ. ಇದು ಕಾಂಗ್ರೆಸ್'ನ ಸರ್ವಸೇನಾಧ್ಯಕ್ಷ, ಕೈ ಸರ್ಕಾರದ ಪವರ್"ಫುಲ್ ಡಿಸಿಎಂ ಡಿಕೆ ಶಿವಕುಮಾರ್ ಶುರು ಮಾಡಿರೋ ಆಟ. ರಾಜ ಸಿಂಹಾಸನವೇರಲು ದಂಡು ಕಟ್ಟುತ್ತಿದ್ದಾರೆ ಡಿಕೆ. ಮಹಾರಾಜ ಪಟ್ಟಕ್ಕಾಗಿ ಅಸಲಿ ಆಟ ಆರಂಭಿಸಿದ್ದಾರೆ ಸೇನಾಪತಿ. ಕಮಲದಳ ನಾಯಕರ ಮೇಲೆ ಬಂಡೆ ಕಣ್ಣು. ಆಪರೇಷನ್ ಆಟದ ಗುಟ್ಟು ರಟ್ಟು. ಆ ಮಹಾ ರಹಸ್ಯವನ್ನು ಬಿಚ್ಚಿಟ್ಟ ಜೆಡಿಎಸ್ ಶಾಸಕ. ಅಷ್ಟಕ್ಕೂ ಏನಿದು ಪಟ್ಟದಾಟ ಪಗಡೆಯಾಟ ರಹಸ್ಯ? ಅದನ್ನೇ ತೋರಿಸ್ತೀವಿ ನೋಡಿ.
 

Video Top Stories