Asianet Suvarna News Asianet Suvarna News

ಕಾಂಗ್ರೆಸ್‌ ಘರ್‌ ವಾಪ್ಸಿ ಆರಂಭ: ಲೋಕಸಭೆ ಚುನಾವಣೆಗೂ ಮುನ್ನ 'ಕೈ' ಹಿಡಿಯುವರೇ ರೆಬೆಲ್‌ ಶಾಸಕರು

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಪತನವನ್ನು ಮಾಡಿದ್ದ ರೆಬೆಲ್‌ ಶಾಸಕರನ್ನು ಘರ್ ವಾಪಸಿ ಮಾಡಿಕೊಳ್ಳಲು ಕಾಂಗ್ರೆಸ್‌ ಸಿದ್ಧವಾಗಿದೆ. ಈಗ ಸದ್ಯಕ್ಕೆ ಒಬ್ಬ ಶಾಸಕರು ಮಾತ್ರ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬರಲಿದ್ದಾರೆ.

ಬೆಂಗಳೂರು (ಆ.16): ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಪತನವನ್ನು ಮಾಡಿದ್ದ ರೆಬೆಲ್‌ ಶಾಸಕರನ್ನು ಘರ್ ವಾಪಸಿ ಮಾಡಿಕೊಳ್ಳಲು ಕಾಂಗ್ರೆಸ್‌ ಸಿದ್ಧವಾಗಿದೆ. ಈಗ ಸದ್ಯಕ್ಕೆ ಒಬ್ಬ ಶಾಸಕರು ಮಾತ್ರ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬರಲಿದ್ದಾರೆ. ಇನ್ನು ಲೋಕಸಭಾ ಚುನಾವಣೆ ವೇಳೆ ಹಲವು ವಲಸೆ ಶಾಸಕರು ಕಾಂಗ್ರೆಸ್‌ಗೆ ವಾಪಸ್‌ ಬರಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಈಗ ದಕ್ಷಿಣ ಕರ್ನಾಟಕದ ಮೂವರು ಹಾಗೂ ಉತ್ತರ ಕರ್ನಾಟಕದ ಒಬ್ಬ ಶಾಸಕರು ಕಾಂಗ್ರೆಸ್‌ಗೆ ಮರಳಿ ಬರಲು ಸಿದ್ಧವಾಗಿದ್ದಾರೆ. ಇನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಕೂಡವೂ ಘರ್‌ ವಾಪ್ಸಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನವನ್ನಾದರೂ ಕರ್ನಾಟಕದಲ್ಲಿ ಗೆಲ್ಲುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.  ಇನ್ನು ಸರ್ಕಾರ ಬೀಳಿಸಿದ ರೆಬೆಲ್‌ ಶಾಸಕರಾದ ರಮೇಶ್‌ ಜಾರಕಿಹೊಳಿ, ಮುನಿರತ್ನ, ಶಿವರಾಮ್‌ ಹೆಬ್ಬಾರ್, ಗೋಪಾಲಯ್ಯ, ಬೈರತಿ ಬಸವರಾಜ್‌, ಎಸ್‌.ಟಿ. ಸೋಮಶೇಖರ್‌ ಮಾತ್ರ ಗೆದ್ದಿದ್ದಾರೆ. ಆದರೆ, ಯಾರು ಘರ್‌ ವಾಪಸ್ಸಿ ಆಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.  ಆದರೆ, ಬೆಂಗಳೂರಿನ ಒಬ್ಬ ಶಾಸಕ ಮಾತ್ರ ಮರಳಿ ಬರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. 
 

Video Top Stories