Asianet Suvarna News Asianet Suvarna News

ಪೊಲೀಸ್ ಇಲಾಖೆ ದುರ್ಬಳಕೆ: ಸಿಎಂ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ

ರಾಜ್ಯ ಸರ್ಕಾರದಿಂದ ಪೊಲೀಸ್ ಇಲಾಖೆಯ ದುರ್ಬಳಕೆ; ಕಾಂಗ್ರೆಸ್‌ನಿಂದ ಪ್ರತಿಭಟನೆ; ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ, ಬಿಗಿ ಭದ್ರತೆ

ಬೆಂಗಳೂರು (ಫೆ. 15): ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌  ಪ್ರತಿಭಟನೆಗೆ ಮುಂದಾಗಿದೆ.

ಇದನ್ನೂ ನೋಡಿ | ರೋಷನ್ ಬೇಗ್ ಆಯ್ತು ಇದೀಗ ಮತ್ತೋರ್ವ ಕೈ ಶಾಸಕ ಹೈಕಮಾಂಡ್ ವಿರುದ್ಧ ಗರಂ

ಬೀದರ್ ಶಾಲೆಯ ಮಕ್ಕಳ ಪೋಷಕರು ಮತ್ತು ಶಿಕ್ಷಕಿ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದು  ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಇದನ್ನೂ ನೋಡಿ | ಅಧಿವೇಶನಕ್ಕೆ ಮೀಡಿಯಾ ಬ್ಯಾನ್; ಸಿಎಂ ಮಾತಿಗೂ ಕ್ಯಾರೇ ಅನ್ನದ ಸ್ಪೀಕರ್!

"