
ಸಿದ್ದರಾಮಯ್ಯ ಬಣದ ಕೆಎನ್ ರಾಜಣ್ಣ ಭೇಟಿಗೆ ಬಂದ ಡಿಕೆಶಿಗೆ ನಿರಾಸೆ
ಡಿಕೆ ಶಿವಕುಮಾರ್ ಜೊತೆ ಎಐಸಿಸಿ ಅಧ್ಯಕ್ಷ ಖರ್ಗೆ ಮಾತುಕತೆ, ರಾಜಣ್ಣ ಭೇಟಿಗೆ ಡಿಕೆ ಶಿವಕುಮಾರ್‌ಗೆ ಸಿಗಲಿಲ್ಲ ಅವಕಾಶ, ವಿಜಯೇಂದ್ರ ಬೆಂಬಲಿಸಿ ರೇಣುಕಾಚಾರ್ಯ ಶಕ್ತಿ ಪ್ರದರ್ಶನ, ನಟ್ಟು ಬೋಲ್ಟ್ ಹೇಳಿಕೆ ಸಮರ್ಥಿಸಿದ ಡಿಕೆ ಶಿವಕುಮಾರ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಕೆಎನ್ ರಾಜಣ್ಣ ಭೇಟಿಗೆ ಇಂದು ಡಿಕೆ ಶಿವಕುಮಾರ್ ಮುಂದಾಗಿದ್ದರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಬದಲಾವಣೆ ಹಾಗೂ ಆಯ್ಕೆ ವಿಚಾರದಲ್ಲಿ ಚರ್ಚಿಸಲು ಡಿಕೆ ಶಿವಕುಮಾರ್ ತಯಾರಿಯೊಂದಿಗೆ ಆಗಮಿಸಿದ್ದರು. ಆದರೆ ಡಿಕೆ ಶಿವಕುಮಾರ್ ಆಗಮಿಸುತ್ತಿದ್ದಂತೆ ಕೆನ್ ರಾಜಣ್ಣ ಆರೋಗ್ಯದ ಕಾರಣ ನೀಡಿ ಮಾತುಕತೆಯಿಂದ ದೂರ ಉಳಿದಿದ್ದರು. ಇದರ ನಡುವೆ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ. 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯ ವಿಶೇಷತೆ ಏನು?