ಕಾಂಗ್ರೆಸ್‌ನ ನಾಲ್ವರಿಗೆ ಟಿಕೆಟ್ ಕೈತಪ್ಪುವ ಭೀತಿ, ಜೋರಾಯ್ತು ಜಾರಕಿಹೊಳಿ ಸಿಡಿ ಜಟಾಪಟಿ!

ಕಾಂಗ್ರೆಸ್‌ನಿಂದ ಒಂಟಿ ಯಾತ್ರೆ ಆರಂಭ, ವಿಧಾನಸೌಧದ ಗೋಡೆಗೆ ಕಿವಿಗೊಟ್ಟರೆ ಲಂಚದ ಧ್ವನಿ ಎಂದ ಸಿದ್ದರಾಮಯ್ಯ, ಅಮಿತ್ ಶಾಗೆ ಸಿಡಿ ಕೇಸ್ ವಿವರಿಸಿದ ಜಾರಕಿಹೊಳಿ, ರಾಜೀನಾಮೆ ಕುರಿತು ಪರಮೇಶ್ವರ್ ಹಾಗೂ ಡಿಕೆಶಿ ಪ್ರತಿಕ್ರಿಯೆ ಏನು? ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Feb 3, 2023, 10:59 PM IST | Last Updated Feb 3, 2023, 10:59 PM IST

ಡಿಕೆ ಶಿವಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿರುವ ರಮೇಶ್ ಜಾರಕಿಹೊಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 20 ನಿಮಿಷಗಳ ಕಾಲ ಸಿಡಿ ಕೇಸ್ ವಿವರಿಸಿದ್ದಾರೆ. ಈ ಕುರಿತು ಶೀಘ್ರದಲ್ಲೇ ಬಿಜೆಪಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇತ್ತ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಂಟಿಯಾಗಿ ಆರಂಭಿಸಿದ ಪ್ರಜಾಧ್ವನಿ ಬಸ್ ಯಾತ್ರೆ ಇದೀಗ ಒಂಟಿ ಯಾತ್ರೆಯಾಗಿ ಮುಂದುವರಿಯಲಿದೆ. ಸಿದ್ದರಾಮಯ್ಯ ಬಸವಕಲ್ಯಾಣದಿಂದ ಯಾತ್ರೆ ಆರಂಭಿಸಿದರೆ, ಡಿಕೆಶಿ ಕೋಲಾರದಿಂದ ಯಾತ್ರೆ ಆರಂಭಿಸಿದ್ದಾರೆ. ಆದರೆ ಡಿಕೆಶಿ ಯಾತ್ರೆ ಹಲವು ಬೆಳವಣಿಗೆಗೆ ಕಾರಣವಾಗಿದೆ. ಕಾಂಗ್ರೆಸ್ ಅಸಮಾಧಾನಕ್ಕೂ ವೇದಿಕೆಯಾಗಿದೆ. ಇದರ ನಡುವೆ ನಾಲ್ವರು ಹಾಲಿ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ.