WATCH: ಚನ್ನಪಟ್ಟಣ ಪಗಡೆ ಗೆಲ್ಲಲು ದಳಪತಿಯ ರೋಚಕ ದಾಳ: 80 ಸಾವಿರ ಮತಗಳ ಲೆಕ್ಕ ಬಿಚ್ಚಿಟ್ಟ ನಿಖಿಲ್!
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಫಿಕ್ಸ್ ಆಗಿದ್ದು, ಡಿಕೆ ಶಿವಕುಮಾರ್ ಕೂಡ ಸ್ಪರ್ಧೆಯಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ನಡುವೆ ಸೈನಿಕ ಯೋಗೇಶ್ವರ್ ಅವರ ನಿಗೂಢ ನಡೆಗಳು ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ.
ಚನ್ನಪಟ್ಟಣದಲ್ಲಿ ಶುರುವಾಗಿದೆ ರೋಚಕ ಪಗಡೆಯಾಟಯ. ಪಟ್ಟಣ ಗೆಲ್ಲಲು ದಳಪತಿಯ ರಣವ್ಯೂಹ, ತೋಟದ ಮನೆಯಲ್ಲೇ ದಳವಾಯಿಗಳಿಗೆ ಭರ್ಜರಿ ಬಾಡೂಟ ಮಾಡಿಸಲಾಗಿದೆ. ಕುಮಾರಸ್ವಾಮಿ ಪುತ್ರದಾಳ ಉರುಳಿಸಲು ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ. ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಪಟ್ಟಣದ ಅಖಾಡದಲ್ಲಿ ನಡೆಯುವ ಬೊಂಬೆಯಾಟದಲ್ಲಿ ಸೈನಿಕ ಯೋಗಿಯ ನಿಗೂಢ ಹೆಜ್ಜೆ, ಮತ್ತೆ ನಾನೇ ಅಭ್ಯರ್ಥಿ ಎಂದ ಕಾಂಗ್ರೆಸ್ ಸಾರಥಿ ಡಿಕೆ ಶಿವಕುಮಾರ್ ಅವರ ನಡೆಗಳು ಕೂಡ ಮಹತ್ವವಾಗಿವೆ. ಇದರ ನಡುವೆಯೇ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ 80 ಸಾವಿರ ಮತಗಳ ಲೆಕ್ಕ ಬಿಚ್ಚಿಟ್ಟಿದ್ದಾರೆ. ಹಾಗಾದರೆ, ಚನ್ನಪಟ್ಟಣದ ಉಪಚುನಾವಣೆ ರಣತಂತ್ರ ಏನೆಂದು ಇಲ್ಲಿ ನೋಡೋಣ ಬನ್ನಿ..
ಚನ್ನಪಟ್ಟಣ ಉಪಚುನಾವಣೆಯ ಮೇಲೆ ಇನ್ನಿಲ್ಲದ ಕುತೂಹಲ. ಕಾರಣ ದಳಪತಿಗಳು ಉರುಳಿಸ್ತಾ ಇರೋ ಒಂದೊಂದು ದಾಳ.ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್ ಅಂತ ಹೇಳಲಾಗ್ತಿದೆ. ಅತ್ತ ಕಡೆ ಕಾಂಗ್ರೆಸ್'ನಿಂದ ನಾನೇ ಅಭ್ಯರ್ಥಿ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳ್ತಿದ್ದಾರೆ. ಎರಡೂ ಪಕ್ಷಗಳಿಂದ ಯಾರೇ ಅಭ್ಯರ್ಥಿಯಾಗಲಿ.., ಫಲಿತಾಂಶ ನಿಂತಿರೋದು ಸೈನಿಕನ ನಡೆಯ ಮೇಲೆ.. ಅಷ್ಟಕ್ಕೂ ಬೊಂಬೆನಾಡಿನ ರಣರಂಗದಲ್ಲಿ ಯೋಗೇಶ್ವರ್ ನಡೆಯೇ ಅಷ್ಟೊಂದು ನಿರ್ಣಾಯಕವಾಗಿದೆ.