ಡಿಕೆಸು Vs ಎಂಬಿಪಾ: ಕೈ ಕೋಟೆಯ ಜಂಗೀಕುಸ್ತಿ ಹಿಂದಿನ ಅಸಲಿ ರಹಸ್ಯ ಏನ್ ಗೊತ್ತಾ..?

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕೈ ನಾಯಕರ ಮಧ್ಯೆ ಜಂಗೀಕುಸ್ತಿ ಶುರುವಾಗಿದೆ. ಸಿದ್ದರಾಮಯ್ಯನವರ ಅತ್ಯಾಪ್ತ ಸಚಿವ ಎಂ.ಬಿ ಪಾಟೀಲ್, ಡಿಸಿಎಂ ಡಿಕೆಶಿ ಬಣದಲ್ಲಿ ಸುನಾಮಿ ಏಳುವಂತೆ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮೇ 25): ವಿಧಾನಸೌಧದಲ್ಲೇ ನಡೆಯಿತಾ ಕೈ ನಾಯಕರ ಜಂಗೀಕುಸ್ತಿ..? ಬಬಲೇಶ್ವರ ಬಂಟ Vs ಬಂಡೆ ಬ್ರದರು ಮಧ್ಯೆ ಏನಿದು ಗುದ್ದಾಟ..? ಬಿಸಿ ಮುಟ್ಟಿಸಿದ ಡಿಕೆ ಸಹೋದರನಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಂ.ಬಿ ಪಾಟೀಲ್. ವಾರ್ನಿಂಗ್ ಅನ್ನೋದೆಲ್ಲಾ ನನ್ನ ಡಿಕ್ಷನರಿಯಲ್ಲೇ ಇಲ್ಲ ಅಂದಿದ್ದೇಕೆ ಸಿದ್ದು ಒಡ್ಡೋಲಗದ ಗಟ್ಟಿಗ..? ಎಂ.ಬಿ ಪಾಟೀಲರೇ ಮುಖ್ಯಮಂತ್ರಿಯಾಗ್ಲಿ ಅಂದ್ರು ಸಂಸದ ಡಿಕೆ ಸುರೇಶ್, ಏನೀ ಮಾತಿನ ಅಸಲಿ ಮರ್ಮ..? ವಾರ್ನಿಂಗ್ ವಾರ್.. ಓಪನ್ ಚಾಲೆಂಜ್.. ಅಸಲಿಗೆ ಆಗಿದ್ದೇನು..?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕೈ ನಾಯಕರ ಮಧ್ಯೆ ಜಂಗೀಕುಸ್ತಿ ಶುರುವಾಗಿದೆ. ಸಿದ್ದರಾಮಯ್ಯನವರ ಅತ್ಯಾಪ್ತ ಸಚಿವ ಎಂ.ಬಿ ಪಾಟೀಲ್, ಡಿಸಿಎಂ ಡಿಕೆಶಿ ಬಣದಲ್ಲಿ ಸುನಾಮಿ ಏಳುವಂತೆ ಮಾಡಿದ್ದಾರೆ. ಅಂತರ್ಯುದ್ಧ ಜಾಸ್ತಿಯಾಗ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ಅಖಾಡಕ್ಕಿಳಿದು ಬಿಟ್ಟಿದೆ. ಪ್ರಚಂಡ ಬಹುಮತದ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದಿದ್ರೂ, ನಾಯಕರ ನಡುವಿನ ಜಂಗೀಕುಸ್ತಿ ನಿಂತಿಲ್ಲ.

Related Video