ಸಂಪುಟ ಕಸರತ್ತು, ಸಿಎಂ ಪಟ್ಟಿಯಲ್ಲಿದೆ ಈ ಸಚಿವಾಕಾಂಕ್ಷಿಗಳ ಹೆಸರು, ಇಲ್ಲಿದೆ ಟ್ವಿಸ್ಟ್!

ಕಗ್ಗಂಟಾಗಿಯೇ ಉಳಿದಿರುವ ಸಂಪುಟ ವಿಸ್ತರಣೆಗೆ ಮುಹೂರ್ತವೇ ಕೂಡಿ ಬರುತ್ತಿಲ್ಲ. ಸಂಕ್ರಾಂತಿ ಆಸುಪಾಸಿನಲ್ಲಿ ಸಂಪುಟ ಕಸರತ್ತು ನಡೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.  ಹೈ ಕಮಾಂಡ್ ಸಿಎಂ ಬಿಎಸ್‌ವೈಗೆ ಬುಲಾವ್ ನೀಡಿದ್ದು, ಸಂಪುಟ ವಿಸ್ತರಣೆಗೆ ಅಸ್ತು ಹೇಳುತ್ತಾರಾ.. ಎಂಬ ಕುತೂಹಲ ಮೂಡಿದೆ. 

First Published Jan 10, 2021, 9:47 AM IST | Last Updated Jan 10, 2021, 10:17 AM IST

ಬೆಂಗಳೂರು (ಜ. 10): ಕಗ್ಗಂಟಾಗಿಯೇ ಉಳಿದಿರುವ ಸಂಪುಟ ವಿಸ್ತರಣೆಗೆ ಮುಹೂರ್ತವೇ ಕೂಡಿ ಬರುತ್ತಿಲ್ಲ. ಸಂಕ್ರಾಂತಿ ಆಸುಪಾಸಿನಲ್ಲಿ ಸಂಪುಟ ಕಸರತ್ತು ನಡೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.  ಹೈ ಕಮಾಂಡ್ ಸಿಎಂ ಬಿಎಸ್‌ವೈಗೆ ಬುಲಾವ್ ನೀಡಿದ್ದು, ಸಂಪುಟ ವಿಸ್ತರಣೆಗೆ ಅಸ್ತು ಹೇಳುತ್ತಾರಾ.. ಎಂಬ ಕುತೂಹಲ ಮೂಡಿದೆ. ಇಂದು ಸಿಎಂ ದೆಹಲಿಗೆ ದೌಡಾಯಿಸಿ ಜೆಪಿ ನಡ್ಡಾ, ಅರುಣ್ ಸಿಂಗ್‌ರನ್ನು ಭೇಟಿಯಾಗಲಿದ್ದಾರೆ.

ಯುವರಾಜ್ ಜೊತೆ ಫೋಟೋ, ಸಚಿವ, ಶಾಸಕರಿಗೆ ಫಜೀತಿ..!

ಇನ್ನೊಂದು ಕಡೆ ಬಸವಕಲ್ಯಾನ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ದಿನಾಂಕ ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ. ಉಪಚುನಾವಣೆಗೂ ಮುನ್ನ ಸಂಪುಟ ಕಸರತ್ತು ನಡೆಸಲು ಸಿಎಂ ಸಿದ್ಧರಿದ್ದಾರೆ. ಈಗಾಗಲೇ ಸಚಿವಾಕಾಂಕ್ಷಿಗಳ ಪಟ್ಟಿ ಕೂಡಾ ಸಿದ್ಧವಾಗಿದ್ದು, ನಡ್ಡಾ ಕೈ ಸೇರಿದೆ. ಹಾಗಾದ್ರೆ ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ..? ನೋಡೋಣ ಬನ್ನಿ..! 

Video Top Stories