'ಕಾಂಗ್ರೆಸ್ ಅಂದರೆ ಬೇರೆಯವರನ್ನು  ಹೈಜಾಕ್ ಮಾಡುವ ಪಾರ್ಟಿ'

* ಕರ್ನಾಟಕದಲ್ಲಿ ರಂಗೇರಿದ ಉಪಚುನಾವಣಾ ಕಣ
* ಕಾಂಗ್ರೆಸ್ ಮೇಲೆ  ಎಚ್‌ಡಿಕೆ  ವಾಕ್ ಪ್ರಹಾರ
* ಕಾಂಗ್ರೆಸ್ ನಮಗಿಂತ ಕೆಳಗಿನ ಸ್ಥಾನದಲ್ಲಿದೆ
* ಮುಸಲ್ಮಾನ ಸಮುದಾಯಕ್ಕೆ ಟಿಕೆಟ್ ಕೊಟ್ಟಿರುವುದು ಹೆಮ್ಮೆ ಇದೆ

First Published Oct 24, 2021, 7:46 PM IST | Last Updated Oct 24, 2021, 7:46 PM IST

ವಿಜಯಪುರ (ಅ. 24)  ಉಪಚುನಾವಣಾ (Karnataka By poll) ಕಣದಲ್ಲಿ ಬೆಂಕಿ ಬಿರುಗಾಳಿ ಎದ್ದಿದೆ.  ಒಂದು ಕಡೆ ಕುಮಾರಸ್ವಾಮಿ ಮೇಲೆ ಜಮೀರ್ ಅಹಮದ್ ವಾಗ್ದಾಳಿ ಮಾಡುತ್ತಿದ್ದರೆ ಕುಮಾರಸ್ವಾಮಿ (HD Kumaraswamy)ಕಾಂಗ್ರೆಸ್ ಮೇಲೆ ಕೆಂಡ ಕಾರಿದ್ದಾರೆ. ಕಾಂಗ್ರೆಸ್  ಜೆಡಿಎಸ್ ಅಭ್ಯರ್ಥಿಗಳನ್ನು ಹೈಜಾಕ್ ಮಾಡಿಕೊಂಡು  ಬಂದಿದೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯರನ್ನು (Siddaramaiah)ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಮೀರ್ ಬಿಚ್ಚಿಟ್ಟ HDK ಸದಾಶಿವನಗರ ಗೆಸ್ಟ್ ಹೌಸ ರಹಸ್ಯ

ಸೂಟ್ ಕೇಸ್ ಬಂದಿದೆ.. ಸೂಟ್ ಕೇಸ್ ಎತ್ತಿಕೊಂಡು ಹೋಗಲು ಕುಮಾರಸ್ವಾಮಿ  ಮತ್ತು ದೇವೇಗೌಡರು ಬಂದಿದ್ದಾರೆ ಎನ್ನುವುದಕ್ಕೆಲ್ಲ ನಾನು ಉತ್ತರ ನೀಡಬೇಕಾ ಎಂದು ಕುಮಾರಸ್ವಾಮಿ  ಕೇಳಿದ್ದರು.   ಹಾನಗಲ್ (Hangal) ಹಾಗೂ ಸಿಂದಗಿ (Sindhagi) ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಮತ್ತು ಫಲಿತಾಂಶ. 

Video Top Stories