
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ, ಪಟ್ಟು ಹಿಡಿದ ಯತ್ನಾಳ್ ಬಣ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ರೆಬೆಲ್ಸ್ ಪಟ್ಟು ಹಿಡಿದಿದೆ. ಇದೀಗ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ಬೇಕೇ ಬೇಕು ಎಂದು ಪಟ್ಟು ಹಿಡಿದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲೇ ಬೇಕು ಎಂದು ಬಸನಗೌಡ್ ಯತ್ನಾಳ್ ಬಣ ಒತ್ತಾಯಿಸಿದೆ. ರಾಜ್ಯ ಉಸ್ತುವಾರಿ ರಾಧಾಮೋಹನ್ ನೇತೃತ್ವದಲ್ಲಿ ಮೂರು ಸಭೆ ನಡೆಸಿದ್ದಾರೆ. ಆರೋಪ ಪ್ರತ್ಯಾರೋಪಗಳಲ್ಲೇ ಮುಳುಗಿದ ಈ ಸಭೆಯಲ್ಲಿ ಎರಡು ಬಣಗಳು ತಮ್ಮ ತಮ್ಮ ಆಗ್ರಹ ನಡೆಯಲೇಬೇಕು ಎಂದು ಪಟ್ಟು ಹಿಡಿದಿದೆ. ಸಿದ್ಧಾಂತ ಮರೆತವರು, ಭ್ರಷ್ಟರಿಗೆ ಅವಕಾಶ ಬೇಡವೆಂದು ಒತ್ತಾಯ ಕೇಳಿಬಂದಿದೆ.