ಸೋಲಿಗೆ ವಿಜಯೇಂದ್ರ, ಯಡಿಯೂರಪ್ಪ ಹೊಂದಾಣಿಕೆ ಕಾರಣ, ಬಿಜೆಪಿ ಶಾಸಕನ ಬಾಂಬ್!

ದೆಹಲಿಗೆ ತೆರಳಿರುವ ಬಸನಗೌಡ ಯತ್ನಾಳ್ ಶಿಸ್ತು ಸಮಿತಿ ಮುಂದೆ ವಿವರಣೆ ನೀಡಲಿದ್ದಾರೆ. ಇತ್ತ ಯತ್ನಾಳ್ ಪರ ಕೆಲವರು ಬ್ಯಾಟ್ ಬೀಸಿದ್ದಾರೆ. ಇತ್ತ ಬಿಜೆಪಿಯ ಮತ್ತೊಬ್ಬ ಶಾಸಕ ರಾಜ್ಯ ಬಿಜೆಪಿ ವಿರುದ್ದ ಮಾಡಿದ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ.

First Published Dec 3, 2024, 11:58 PM IST | Last Updated Dec 3, 2024, 11:58 PM IST

ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸ್ಥಿತಿಗೆ ರಾಜ್ಯ ನಾಯಕರಾದ ಬಿವೈ ವಿಜಯೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ಮಾಡಿಕೊಂಡ ಒಳ ಒಪ್ಪಂದವೇ ಕಾರಣ ಎಂದು ಬಿಜೆಪಿ ಶಾಸಕ ಬಿಪಿ ಹರೀಶ್ ಆರೋಪಿಸಿದ್ದಾರೆ. ಹಲುವು ಕಡೆ ರಾಜ್ಯ ನಾಯಕರು ಕಾಂಗ್ರೆಸ್ ಸೇರಿದಂತೆ ಇತರರ ಜೊತೆ ಒಳ ಒಪ್ಪಂದ ಮಾಡಿಕೊಂಡು ರಾಜ್ಯ ಬಿಜೆಪಿಗೆ ಈ ಸ್ಥಿತಿ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯ ಬಿಜೆಪಿಯ ಈ ಪರಿಸ್ಥಿತಿಗೆ ಕಾರಣವೇನು? ಪಕ್ಷದಿಂದ ಯತ್ನಾಳ್ ಉಚ್ಚಾಟನೆಯಾಗ್ತಾರಾ?