ಚುನಾವಣೆ ಗೆಲ್ಲಲು ಬಿಜೆಪಿಯಿಂದ ರಥಯಾತ್ರೆ, ಕಾಂಗ್ರೆಸ್‌ನಲ್ಲಿ ಹೆಚ್ಚಾಯ್ತಾ ಅಸಾಮಾಧಾನ ಕಿಡಿ?

ಹಾಸನದಲ್ಲಿ ರಾಜಕೀಯ ತಂತ್ರಗಾರಿಕೆ ಬದಲು, ಎ ಮಂಜು ಜೆಡಿಎಸ್‌ಗೆ, ಕರ್ನಾಟಕ ರಾಜಕೀಯ ತಂತ್ರಗಾರಿಕೆ ಅರಿತ ನಾಯಕನ ಕೈಗೆ ಬಿಜೆಪಿ ಚುನಾವಣೆ ಉಸ್ತುವಾರಿ, ಅಸಮಾಧಾನದ ನಡುವೆ ಖರ್ಗೆ ಭೇಟಿ ಮಾಡಲಿದ್ದಾರೆ ಪರಮೇಶ್ವರ್, ಡಿಕೆ ಶಿವಕುಮಾರ್ ಯಾತ್ರೆಯಲ್ಲಿ ಬಣ ರಾಜಕೀಯ ಮೇಲಾಟ ಸೇರಿದಂತೆ ಇಂದಿನ ಇಡೀ ದಿನ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Feb 4, 2023, 11:18 PM IST | Last Updated Feb 4, 2023, 11:18 PM IST

ಮುಂಬರುವ ವಿಧಾನಸಭಾ ಚುನಾವಣೆ ಗೆಲ್ಲಲು ಬಿಜೆಪಿ ಎ, ಬಿ, ಸಿ ಹಾಗೂ ಡಿ ಕೆಟಗರಿಯಾಗಿ ಕ್ಷೇತ್ರಗಳನ್ನು ವಿಂಗಡಿಸಿದೆ. ಪ್ರತಿ ಕೆಟಗರಿ ಕ್ಷೇತ್ರಕ್ಕೆ ಬೇರೆ ಬೇರೆ ಪ್ಲಾನ್ ಮಾಡಲಾಗಿದೆ. ಇದರಂತೆ ಬಿಜೆಪಿ ಚುನಾವಣೆ ಎದುರಿಸಲಿೆ. ಇದರ ಜೊತೆಗೆ ಬಿಜೆಪಿ ರಥಯಾತ್ರೆಗೆ ಪ್ಲಾನ್ ಮಾಡಿದೆ. ನಾಲ್ಕು ನಾಯಕರ ರಥಯಾತ್ರೆ ದಾವಣೆಗೆರೆಯಲ್ಲಿ ಸಮಾವೇಶ ನಡೆಸಲಿದೆ. ಸಿದ್ದರಾಮೋತ್ಸವ ಮಾಡಿದ ಜಾಗದಲ್ಲೇ ಇದೀಗ ಬಿಜೆಪಿ ಅತೀ ದೊಡ್ಡ ಸಮಾವೇಶ ನಡೆಸಲಿದೆ. ಈ ಸಭೆಗೆ ಪ್ರಧಾನಿ ಮೋದಿ ಕರೆಸಿ ಅಬ್ಬರಿಸಲು ಬಿಜೆಪಿ ಅತೀ ದೊಡ್ಡ ಪ್ಲಾನ್ ರೆಡಿ ಮಾಡಿದೆ.ಇತ್ತ ಕಾಂಗ್ರೆಸ್ ವಿರುದ್ದ ಮುನಿಸಿಕೊಂಡ ಕಾಂಗ್ರೆಸ್ ನಾಯಕ ಡಿ ಪರಮೇಶ್ವರ್ ಅವರನ್ನು ಹೈಕಮಾಂಡ್ ನಾಯಕರು ಮನ ಒಲಿಸಿದ್ದಾರೆ. ಆದರೆ ಪರಂ ಅಸಮಾಧಾನ ತಣ್ಣಗಾಗಿರುವ ಲಕ್ಷಣ ಕಾಣಿಸುತ್ತಿಲ್ಲ. ನಾಳೆ ಪರಮೇಶ್ವರ್ ದೆಹಲಿ ತೆರಳಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಲಿದ್ದಾರೆ. ಈ ಕುರಿತ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.