News Hour: ವಿಧಾನಸಭೆಯಲ್ಲಿ ಇಂದು ವರ್ಗಾವಣೆ ಜಟಾಪಟಿ!

ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಅದರಲ್ಲೂ ಪ್ರಮುಖವಾಗಿ ವಿಪಕ್ಷಗಳ ವರ್ಗಾವಣೆ ಆರೋಪದ ಬಗ್ಗೆ ಉತ್ತರ ನೀಡಿದರು.
 

Share this Video
  • FB
  • Linkdin
  • Whatsapp

ಬೆಂಗಳೂರು (ಜು.13): ವಿಧಾನಸಭೆಯಲ್ಲಿ ಗುರುವಾರ ವರ್ಗಾವಣೆ ದಂಧೆ ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಮಾತನಾಡಿದರು. 'ನಮ್ಮ ಸರ್ಕಾರ ಬಂದ ಮೇಲೆ ಹೆಚ್ಚು ವರ್ಗಾವಣೆ ಆಗಿರಬಹುದು. ಆದರೆ, ಇದು ಆಡಳಿತಾತ್ಮಕ ವರ್ಗಾವಣೆ. ವರ್ಗಾವಣೆ ಆದಾಗಲೆಲ್ಲಾ ದಂಧೆ, ವ್ಯಾಪಾರ ಅನ್ನೋದು ಹಾಸ್ಯಾಸ್ಪದ' ಎಂದಿದ್ದಾರೆ.

ಇನ್ನೊಂದೆಡೆ, ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ದಿನಕ್ಕೊಂದು ಬಾಂಬ್‌ ಎಸೆಯುತ್ತಿದ್ದಾರೆ. ವರ್ಗಾವಣೆ ಡೀಲ್‌, ವೈಎಸ್‌ಟಿ ಟ್ಯಾಕ್ಸ್‌ ಎಂದು ಟೀಕೆ ಮಾಡಿರುವ ಎಚ್‌ಡಿಕೆ, ಕಾಂಗ್ರೆಸ್‌ನಲ್ಲಿಯೇ ಗುಂಪುಗಾರಿಕೆ ಇದೆ. ಕೆಲವರನ್ನು ಉದುರಿಸಲು ಕಾಂಗ್ರೆಸ್ ಶಾಸಕರು ಪ್ಲ್ಯಾನ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಲೋಕಸಭೆಗೆ ಜೆಡಿಎಸ್-ಬಿಜೆಪಿ ಮೈತ್ರಿಯಾದರೆ, ಮಂಡ್ಯ ಸಂಸದೆ ಸುಮಲತಾ ಕಥೆ ಏನು?

ಅದರೊಂದಿಗೆ ಸದನದಲ್ಲಿ ಮತ್ತೊಮ್ಮೆ ಅಕ್ಕಿ ರಾಜಕೀಯ ಪ್ರಸ್ತಾಪವಾಯಿತು. ಅಕ್ಕಿ ವಿಚಾರದಲ್ಲಿ ಬಿಜೆಪಿಯವರಿಗೆ ನಾಚಿಕೆಯೇ ಇಲ್ಲ ಎಂದು ಸಿದ್ಧರಾಮಯ್ಯ ಗರಂ ಆದರು. ಅಕ್ಕಿ ಘೋಷಣೆ ಮಾಡಿ ಬಿಜೆಪಿಯವರು ಅಕ್ಕಿ ಕೊಡ್ತಾ ಇಲ್ಲ ಅಂದ್ರೆ ಹೇಗೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.

Related Video