Asianet Suvarna News Asianet Suvarna News

Ground Report: ವಿಜಯಪುರದಲ್ಲಿ ಟಿಕೆಟ್‌ಗಾಗಿ ಜಿದ್ದಾಜಿದ್ದಿ!

ರಾಜ್ಯ ರಾಜಕೀಯದ ಕಾವು ನಿಧಾನವಾಗಿ ಏರುತ್ತಿದೆ. ಕರ್ನಾಟಕ ಕುರುಕ್ಷೇತ್ರಕ್ಕೆ ಇನ್ನು ಕೆಲವೇ ತಿಂಗಳುಗಳು ಬಾಕಿ. ಆದರೆ, ಜಿಲ್ಲೆಗಳಲ್ಲಿ ಚುನಾವಣಾ ಹುರುಪು ಹೇಗಿದೆ. ಟಿಕೆಟ್‌ಗಾಗಿ ಯಾರೆಲ್ಲಾ ಫೈಟ್‌ನಲ್ಲಿ ಇದ್ದಾರೆ ಎನ್ನುವ ಗ್ರೌಂಡ್‌ ರಿಪೋರ್ಟ್‌ನಲ್ಲಿ ಈ ಬಾರಿ ವಿಜಯಪುರ ಜಿಲ್ಲೆಯ ವರದಿ.
 

ವಿಜಯಪುರ (ನ.28): ರಾಜ್ಯ ರಾಜಕೀಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಅದರೊಂದಿಗೆ ಪ್ರತಿ ಜಿಲ್ಲೆಗಳಲ್ಲಿ ನಾಯಕರು ಟಿಕೆಟ್‌ ನಿರೀಕ್ಷೆಯಲ್ಲಿ ಹೋರಾಟ ಆರಂಭಿಸಿದ್ದಾರೆ. ಆಲಮಟ್ಟಿಯ ಊರು ವಿಜಯಪುರದಲ್ಲಿ ಈ ಬಾರಿಯ ರಾಜಕೀಯ ಕಣ ಹೇಗೆಲ್ಲಾ ರಂಗೇರಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

ಬಿಜೆಪಿಯ ಭದ್ರಕೋಟೆಯಾಗಿರುವ ವಿಜಯಪುರವನ್ನು ಭೇದಿಸಲು ಕಾಂಗ್ರೆಸ್‌ ಶತ ಪ್ರಯತ್ನ ಆರಂಭಿಸಿದೆ. ಇಲ್ಲಿನ ಪ್ರಮುಖ ಬಿಜೆಪಿ ನಾಯಕರಾಗಿರುವ ಬಸವನಗೌಡ ಪಾಟೀಲ್‌ ಯತ್ನಾಲ್‌ ವಿರುದ್ಧ ಕಾಂಗ್ರೆಸ್‌ನಿಂದ 20 ನಾಯಕರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ನಾಲ್ಕು ಬಿಜೆಪಿ ತೆಕ್ಕೆಯಲ್ಲಿದ್ದರೆ, ಮೂರು ಕಾಂಗ್ರೆಸ್‌ ಪಕ್ಷದ ಕೈಯಲ್ಲಿದ್ದರೆ, ನಾಗಠಾಣಾ ಮೀಸಲು ಕ್ಷೇತ್ರ ಮಾತ್ರ ಜೆಡಿಎಸ್‌ನ ವಶದಲ್ಲಿದೆ.

Ticket Fight: ಯತ್ನಾಳ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ 20 ಆಕಾಂಕ್ಷಿಗಳು

ವೈಯಕ್ತಿಕ ವರ್ಚಸ್ಸು ಮತ್ತು ಹಿಂದುತ್ವದ ಅಜೆಂಡಾದಿಂದ ಜಿಲ್ಲೆಯ ಪ್ರಮುಖ ನಾಯಕರಾಗಿರುವ ಬಸವನಗೌಡ ಪಾಟೀಲ್‌ ಯತ್ನಾಳ್‌ ಈ ಬಾರಿಯೂ ಬಿಜೆಪಿಯ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಪಂಚಮಸಾಲಿ ಮೀಸಲು ಹೋರಾಟ ಕೂಡ ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಇನ್ನು ಬಬಲೇಶ್ವರದಲ್ಲಿ ಎಂಬಿ ಪಾಟೀಲ್‌ ಭದ್ರಕೋಟ ಭೇದಿಸೋದು ಬಿಜೆಪಿಗೆ ಕಷ್ಟವಾಗಲಿದೆ.

Video Top Stories