Ground Report: ಗಣಿನಾಡಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಕದನ: ಬಿಜೆಪಿ ಅಲೆ ಎಬ್ಬಿಸಲು ರಾಮುಲು ಸರ್ಕಸ್
ಬಳ್ಳಾರಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದರೆ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಈ ಬಾರಿಯ ಚುನಾವಣಾ ಗ್ರೌಂಡ್ ರಿಪೋರ್ಟ್ ಹೀಗಿದೆ.
ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸೋಮಶೇಖರ ರೆಡ್ಡಿ ಹೊರತುಪಡಿಸಿ ಯಾವ ಆಕಾಂಕ್ಷಿಗಳ ಹೆಸರೂ ಕೇಳಿ ಬರುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಸಂಡೂರಿನಲ್ಲಿ ಕಾಂಗ್ರೆಸ್‌ನಿಂದ ಈ.ತುಕಾರಾಂ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಬಿಜೆಪಿಯಿಂದ ಈ ಬಾರಿ ದಿವಾಕರ್, ಯಲ್ಲಪ್ಪ, ಗಂಡಿ ಮಾರೆಪ್ಪ, ಕಾಡ್ ರಘು ಆಕಾಂಕ್ಷಿತರಾಗಿದ್ದಾರೆ. ಸಿರುಗುಪ್ಪದಲ್ಲಿ ಮತ್ತೆ ಬಿಜೆಪಿ-ಕಾಂಗ್ರೆಸ್ ಪೈಪೋಟಿ ನಡೆದಿದೆ. ಕಂಪ್ಲಿ ಕ್ಷೇತ್ರದಲ್ಲಿ ಮತ್ತೆ ಗಣೇಶ್- ಸುರೇಶ್ ಬಾಬು ನಡುವೆ ಫೈಟ್ ಏರ್ಪಟ್ಟಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶ್ರೀರಾಮುಲು-ನಾಗೇಂದ್ರ ಕದನ ಶುರುವಾಗಿದೆ. ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳದ ಬಳಿಕ ಜಿಲ್ಲೆಯಲ್ಲಿ ಬಿಜೆಪಿ ಅಲೆ ಎಬ್ಬಿಸಲು ರಾಮುಲು ಎಲ್ಲಿಲ್ಲದ ಸರ್ಕಸ್ ಮಾಡುತ್ತಿದ್ದು, ಈ ಬಾರಿಯು ಜಿಲ್ಲೆಯಲ್ಲಿ ಕೈ-ಕಮಲ ಕಾಳಗ ನಡೆಯಲಿದೆ.