Mutalik: ಕಾರ್ಕಳ 'ಹಿಂದೂ' ಸಮರ: ಮುತಾಲಿಕ್‌ಗಾಗಿ ಕ್ಷೇತ್ರ ಬಿಡ್ತಾರಾ ಸುನೀಲ್ ಕುಮಾರ್?

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾಳಗ ಜೋರಾಗಿದ್ದು, ಇದೀಗ ಸಚಿವ ಸುನೀಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ತೊಡೆ ತಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಕಾರ್ಕಳದಲ್ಲಿ ಗುರು-ಶಿಷ್ಯರ ನಡುವೆ ಕುರುಕ್ಷೇತ್ರ ಸಮರ ಏರ್ಪಟ್ಟಿದ್ದು, ಹಿಂದುತ್ವಕ್ಕಾಗಿ ಕ್ಷೇತ್ರ ಬಿಟ್ಟುಕೊಡು ಎಂದು ಸಚಿವ ಸುನೀಲ್ ಕುಮಾರ್'ಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಸವಾಲು ಹಾಕಿದ್ದಾರೆ. ನಿಜ ಹಿಂದುತ್ವ, ಆರ್‌ಎಸ್‌ಎಸ್‌ ಬದ್ಧತೆ ಇದ್ದರೆ ಕ್ಷೇತ್ರ ಬಿಡು, ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸುನೀಲ್‌ ಕುಮಾರ್'ಗೆ ಮುತಾಲಿಕ್ ಸಲಹೆ ನೀಡಿದ್ದಾರೆ. ಶಿಷ್ಯನ ವಿರುದ್ಧವೇ ಮುತಾಲಿಕ್‌ ಸ್ಪರ್ಧೆಗಿಳಿಯುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಕಾರ್ಕಳದಲ್ಲಿ ಅವರು ಸಭೆಗಳನ್ನು ನಡೆಸುತ್ತಿದ್ದು, ಹಿಂದುತ್ವವನ್ನು ಅಜೆಂಡಾ ಮಾಡಿಕೊಂಡಿದ್ದಾರೆ. ಅದಲ್ಲದೆ ನನ್ನದು ನಿಜವಾದ ಹಿಂದುತ್ವ, ಹಿಂದುತ್ವದಲ್ಲಿ ಗುರುವಾಗಿದ್ದವನು ನಿನಗೆ ನಾನು. ಈ ಕ್ಷೇತ್ರವನ್ನು ನನಗೆ ಬಿಟ್ಟು ಕೊಡು ಎಂದು ಹೇಳುತ್ತಿದ್ದಾರೆ.

ಉದ್ಯಮ ಯಶಸ್ಸಿಗೆ ಆತ್ಮವಿಶ್ವಾಸ, ಧೈರ್ಯ ಮುಖ್ಯ: ಕೆ.ಎಸ್‌.ಈಶ್ವರಪ್ಪ

Related Video