ಸವದಿ, ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿರೋದು ಬಿಜೆಪಿಗೆ ಪ್ಲಸ್:ಸಿ ಎಂ ಬೊಮ್ಮಾಯಿ

ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಅವರು ಕಾಂಗ್ರೆಸ್ ಗೆ ಹೋಗಿರೋದರಿಂದ ಬಿಜೆಪಿಗೆ ಒಳಿತಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ

Share this Video
  • FB
  • Linkdin
  • Whatsapp

ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಅವರು ಕಾಂಗ್ರೆಸ್ ಗೆ ಹೋಗಿರೋದರಿಂದ ಬಿಜೆಪಿಗೆ ಒಳಿತಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಪದವಿ ಪಡೆದು ನಂತರ ಕಾಂಗ್ರೆಸ್ ಗೆ ಹೋಗಿರುವ ಅವರನ್ನು ಜನರು ಒಪ್ಪುವುದಿಲ್ಲ. ಕಾಂಗ್ರೆಸ್ ಮಿತ್ರರಿಗೆ ನಾನು ಧನ್ಯವಾದ ಹೇಳಲು ಇಷ್ಟ ಪಡುತ್ತೇನೆ. ಸವದಿ, ಶೆಟ್ಟರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿ ಗೆ ಪ್ಲಸ್ ಆಗುತ್ತದೆ. ಅವರ ಕ್ಷೇತ್ರದಲ್ಲಿ ಅವರ ವಿರುದ್ದ ಜನರು ಮಾತನಾಡುತ್ತಿದ್ದಾರೆ ಎಂದಿದ್ದಾರೆ.

Related Video