7 ದಿನ 18 ಸಮಾವೇಶ 6 ಬೃಹತ್ ರೋಡ್ ಶೋ, ದಶದಿಕ್ಕುಗಳಲ್ಲಿ ಮೋದಿ ಹವಾ ಬಿಜೆಪಿಗೆ ವರವಾಗುತ್ತಾ..?

ಕರ್ನಾಟಕ ಕುರುಕ್ಷೇತ್ರ ಕೊನೆಯ ಹಂತ ತಲುಪಿದೆ. ಅಬ್ಬರದ ಪ್ರಚಾರ, ಸಿಡಿಲಬ್ಬರದ ಭಾಷಣ, ಬೃಹತ್ ರೋಡ್ ಶೋ.. ಎಲ್ಲವೂ ಕೊನೆಕೊಳ್ಳಲಿವೆ. ದಶದಿಕ್ಕುಗಳಲ್ಲಿ ಮೋದಿ ಹವಾ.. ಬಿಜೆಪಿಗೆ ವರವಾಗುತ್ತಾ..?

Share this Video
  • FB
  • Linkdin
  • Whatsapp

ರಾಜ್ಯ ಚುನಾವಣಾ ರಣಕಣ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದ್ದು,ಇಂದು ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಬರೋಬ್ಬರಿ 40 ದಿನಗಳ ಚುನಾವಣಾ ಬಹಿರಂಗ ಪ್ರಚಾರ ಇಂದು ಅಂತ್ಯವಾಗಲಿದೆ. ಕರ್ನಾಟಕ ಕುರುಕ್ಷೇತ್ರ ಕೊನೆಯ ಹಂತ ತಲುಪಿರುವುದರಿಂದ ಅಬ್ಬರದ ಪ್ರಚಾರ, ಸಿಡಿಲಬ್ಬರದ ಭಾಷಣ, ಬೃಹತ್ ರೋಡ್ ಶೋ.. ಎಲ್ಲವೂ ಕೊನೆಕೊಳ್ಳಲಿವೆ. ಇನ್ನು ಕರ್ನಾಟಕ ಕುರುಕ್ಷೇತ್ರದಲ್ಲಿ ಬಿಜೆಪಿ ಝಂಡಾ ಹಾರಿಸುವ ಶಪಥ ಮಾಡಿದೆ. ಗುಜರಾತ್ ರ್ಯಾಲಿ ಟ್ರಿಕ್ ಬಳಸಿ ಮೋದಿ ಬೆಂಗಳೂರಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ಹಾಗಾದರೆ 7 ದಿನ 18 ಸಮಾವೇಶ 6 ಬೃಹತ್ ರೋಡ್ ಶೋ ದಶದಿಕ್ಕುಗಳಲ್ಲಿ ಮೋದಿ ಹವಾ.. ಬಿಜೆಪಿಗೆ ವರವಾಗುತ್ತಾ..? ಪ್ರಧಾನಿ ಮೇನಿಯಾ ಯಾರಿಗೆ ಲಾಭವಾಗುತ್ತೆ..? ಮೋದಿ ಹವಾ ಬಿಜೆಪಿಗೆ ವರವಾಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Related Video