35, 58, 131, ರಾಜ್ಯ ಚುನಾವಣಾ ಅಖಾಡದಲ್ಲಿ ಮೂರು ಪಕ್ಷಗಳ ನಿಗೂಢ ಲೆಕ್ಕಾಚಾರ!

ಮೂರು ಪಕ್ಷ.. ಒಂದೇ ಮಂತ್ರ..ಚಿತ್ರ ವಿಚಿತ್ರ ರಣತಂತ್ರ.. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು 35.. 58... 131ರ ನಿಗೂಢ ಲೆಕ್ಕಾಚಾರ ಹಾಕಿ ರಣತಂತ್ರ ಹೆಣೆಯುತ್ತಿದೆ. ಅಷ್ಟಕ್ಕೂ ಏನಿದು ಲೆಕ್ಕಾಚಾರ ಇಲ್ಲಿದೆ ಸಂಪೂರ್ಣ ವಿವರ.

First Published Apr 13, 2023, 4:50 PM IST | Last Updated Apr 13, 2023, 4:50 PM IST

35.. 58... 131..ಇದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಲೆಕ್ಕಾಚಾರದ ಮಂತ್ರ ಇದು. ಮೂರು ಪಕ್ಷಗಳು ಚುನಾವಣಾ ಅಖಾಡ ಗೆಲ್ಲಲು ರೆಡಿ ಮಾಡಿರುವ ರಣತಂತ್ರ. ಈ ಬಾರಿ ಯಾರು ಅಧಿಕಾರ ಹಿಡಿಯಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಮೂರು ಪಕ್ಷಗಳು ಪ್ರಬಲ ಪೈಪೋಟಿ ನಡೆಸುತ್ತಿದೆ. ಘೋಷಣೆ ಮಾಡಿದ ಕ್ಷೇತ್ರಕ್ಕಿಂತ ರಹಸ್ಯ ಉಳಿಸಿಕೊಂಡಿರುವ ಕ್ಷೇತ್ರಗಳೇ ಈ ಬಾರಿಯ ಚುನಾವಣಾ ರಣತಂತ್ರದ ತಿರುಳು. ಬಾಕಿ ಉಳಿದ ಕ್ಷೇತ್ರಗಳಲ್ಲಿ ಯಾರೂ ಊಹಿಸದ ಟ್ವಿಸ್ಟ್ ಅಡಗಿದೆ. ಯಾವ ಕ್ಷೇತ್ರದ ಸೀಕ್ರೆಟ್ ಏನು ಇಲ್ಲಿದೆ ವಿವರ