Karnataka Election: ಹಾಸನದಲ್ಲಿ ಜೆಡಿಎಸ್ ಗೆಲುವಿನ ಮಂತ್ರ: ಪ್ರೀತಂ ಗೌಡಗೆ ಠಕ್ಕರ್ ಕೊಡಲು ರೇವಣ್ಣ ಪ್ಲಾನ್

ಹಾಸನದಲ್ಲಿ ಜೆಡಿಎಸ್ ಗೆಲುವಿನ ಮಂತ್ರದ ಜೊತೆಗೆ ಟಿಕೆಟ್‌ ವಿತರಣೆ ತಂತ್ರ ಕೂಡ ರೂಪಿಸಲಾಗುತ್ತಿದೆ‌. ಈ ಕುರಿತು ಹಾಸನ ಸಂಸದರ ನಿವಾಸದಲ್ಲಿ ಕ್ಷೇತ್ರದ ಮುಖಂಡರ ಸಭೆ ನಡೆಸಲಾಗಿದೆ.

Share this Video
  • FB
  • Linkdin
  • Whatsapp

ಜೆಡಿಎಸ್‌ ಭದ್ರಕೋಟೆಯಲ್ಲಿ ಟಿಕೆಟ್‌ ಫೈಟ್‌ ಮುಂದುವರೆದಿದ್ದು, ಹಾಸನದಲ್ಲಿ ಗೆಲುವಿನ ಮಂತ್ರದ ಜೊತೆ ಟಿಕೆಟ್‌ ವಿತರಣೆ ತಂತ್ರ ಶುರುವಾಗಿದೆ. ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ಹಾಸನ ಸಂಸದರ ನಿವಾಸದಲ್ಲಿ ಕ್ಷೇತ್ರದ ಮುಖಂಡರ ಜೊತೆ ಸಭೆ ನಡೆಸಿ ಯಾರಿಗೆ ಟಿಕೆಟ್‌ ಕೊಟ್ರೆ ಕ್ಷೇತ್ರ ಜೆಡಿಎಸ್‌ ತೆಕ್ಕೆಗೆ ಬರುತ್ತೆ ಎಂದು ಚರ್ಚೆ ನಡೆದಿದೆ. ಸೂರಜ್‌, ಭವಾನಿ ಅಥವಾ ರೇವಣ್ಣ ಅವರಿಗೆ ಟಿಕೆಟ್‌ ಎಂಬ ಬಗ್ಗೆ ಚರ್ಚೆ ನಡೆದಿದ್ದು, ಪ್ರೀತಂ ಗೌಡರ ಸವಾಲು ಸ್ವೀಕರಿಸಿ ಹಾಸನದಲ್ಲಿ ನಿಲ್ಲಲು ರೇವಣ್ಣ ಪ್ಲಾನ್‌ ಮಾಡಿದ್ದಾರೆ. ಎರಡು ಕಡೆ ಗೆದ್ರೆ ಹೊಳೆನರಸೀಪುರ ಬಿಟ್ಟು ಹಾಸನದಲ್ಲಿ ಇರುವುದಕ್ಕೆ ಪ್ಲಾನ್‌ ನಡೆದಿದ್ದು, ಹೊಳೆನರಸೀಪುರದಿಂದ ಭವಾನಿ ರೇವಣ್ಣ ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಈಗಾಗಲೇ ಕುಮಾರಸ್ವಾಮಿ ಜೊತೆ ರೇವಣ್ಣ ಚರ್ಚೆ ಮಾಡಿದ್ದಾರೆ.

Related Video