Karnataka Assembly Election 2023: ಕಾಂಗ್ರೆಸ್ ಅಭ್ಯರ್ಥಿ ಘೋಷಣೆ: ಸಿದ್ದು ಟೀಂಗೆ ಡಿಕೆಶಿ ಖಡಕ್ ವಾರ್ನಿಂಗ್

ಸಿದ್ದರಾಮಯ್ಯ ಹೋದಲ್ಲಿ ಬಂದಲ್ಲಿ ಟಿಕೆಟ್ ಘೋಷಣೆ ಮಾಡುತ್ತಾ ಡಿಕೆಶಿ ಬಣಕ್ಕೆ ಚೆಕ್ಮೆಟ್ ಕೊಡ್ತಿದ್ರೆ, ಇತ್ತ ಡಿಕೆಶಿ ಟಿಕೆಟ್ ಘೋಷಿಸಿದ್ರೆ ನೋಟಿಸ್ ಕೋಡೊದಾಗಿ ವಾರ್ನಿಂಗ್ ಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಕರ್ನಾಟಕದಲ್ಲಿ ವಿಧಾನಸಭೆ ಕುರುಕ್ಷೇತ್ರಕ್ಕೆ ಕಾಂಗ್ರೆಸ್ ಶಸ್ತ್ರಾಭ್ಯಾಸ ಆರಂಭಿಸಿದೆ. ಆದ್ರೆ ಕಾಂಗ್ರೆಸ್'ಗೆ ಆಂತರಿಕ ಜಗಳವೇ ಮಗ್ಗಲು ಮುಳ್ಳಾಗಿ ಕಾಡ್ತಿದೆ. ಯಾರೂ ಟಿಕೆಟ್ ಘೋಷಣೆ ಮಾಡಕೂಡದು ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ರೆ, ಸಿದ್ದು ಬಣ ಮಾತ್ರ, ಡಿಕೆಶಿ ಹಾಗೂ ಹೈಕಮಾಂಡ್ ಹಾಕಿದ ಗೆರೆಯನ್ನು ದಾಟಿ, ಜಿಲ್ಲೆ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಲೇ ಟಿಕೆಟ್ ಘೋಷಣೆ ಮಾಡ್ತಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ ಮಾತ್ರ ಅಭ್ಯರ್ಥಿಗಳ ಹೆಸರುಗಳನ್ನು ಅನೌನ್ಸ್ ಮಾಡ್ತಿದ್ರು, ಆದ್ರೆ ಈಗ ಇವರೊಟ್ಟಿಗೆ ಜಮೀರ್ ಕೂಡ ಸೇರಿಕೊಂಡು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡ್ತಿದ್ದಾರೆ. ಈ ಬೆಳವಣಿಗೆ ಸರಿಯಲ್ಲ ಅಂತ ಸಿದ್ದು ಬಣದಲ್ಲಿದ್ದವರೇ ಹೇಳ್ತಿದ್ದಾರೆ. ಹಾಗೂ ಈ ಕುರಿತು ಡಿಕೆಶಿ ಖಡಕ್ ಉತ್ತರ ಕೊಟ್ಟಿದ್ದಾರೆ.

Related Video