ನನ್ನನ್ನು ರಾಜಕೀಯ ಕಣದಿಂದ ತೆಗೆದು ಹಾಕುವ ಪ್ರಯತ್ನ ನಡೆಯುತ್ತಿದೆ -ಡಿ. ಕೆ. ಶಿವಕುಮಾರ್ ಆರೋಪ

 ನನ್ನನ್ನು ರಾಜಕೀಯ ಕಣದಿಂದ ತೆಗೆಯುವ ಯತ್ನ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆರೋಪಿಸಿದ್ದಾರೆ.

Share this Video
  • FB
  • Linkdin
  • Whatsapp

 ನನ್ನನ್ನು ರಾಜಕೀಯ ಕಣದಿಂದ ತೆಗೆಯುವ ಯತ್ನ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆರೋಪಿಸಿದ್ದಾರೆ.ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,‌
ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ, ಅದಕ್ಕೆ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ಗಂಟೆಯಾಗಿ ನಾನು ಕ್ರಮ ಕೈಗೊಂಡಿದ್ದೇನೆ. ಸರ್ಕಾರದ ಮೇಲೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹಾಕಿ ಸಿಬಿಐ ತನಿಖೆಗೆ ನೀಡಲಾಗಿದೆ.ರಾಹುಲ್ ಗಾಂಧಿ ಅವರನ್ನೂ ಸಂಸದ ಸ್ಥಾನದಿಂದ ವಜಾ ಮಾಡಲಾಗಿದೆ. ಅವರನ್ನೇ ಬಿಟ್ಟಿಲ್ಲ. ಸೋನಿಯಾ ಗಾಂಧಿಗೂ ಸಾಕಷ್ಟು ಕಿರುಕುಳ ಕೊಡಲಾಗಿದೆ‌. ಇದೀಗ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ, ಅಧಿಕಾರ ದುರುಪಯೋಗ ನಡೆಯುತ್ತಿದೆ, ಕುತಂತ್ರ ಇದೆ. ಕೊಡಬಾರದ ಕಷ್ಟಗಳನ್ನು ನೀಡಿದ್ರು ತನಿಖೆ ಹೆಸರಿನಲ್ಲಿ ಸಕಷ್ಟು ತೊಂದರೆ ನೀಡಿದ್ರು ಎಂದು ಹೇಳಿದರು .

Related Video