224 ರಣಕ್ಷೇತ್ರಗಳಲ್ಲಿ 11 ಸೆಂಟರ್ ಆಫ್ ಅಟ್ರಾಕ್ಷನ್..11ರ ರಹಸ್ಯದಲ್ಲಿ ಅಡಗಿರೋ ಗುಟ್ಟೇನು ಗೊತ್ತಾ..?
ಮೇ 10 ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಮತದಾನಕ್ಕೆ ಇನ್ನು ಒಂದು ದಿನ ಬಾಕಿ ಇದೆ. 224 ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಒಟ್ಟು 2,613ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. 224 ಅಖಾಡಗಳಲ್ಲಿ ಎರಡೂವರೆ ಸಾವಿರಕ್ಕೂ ಅಭ್ಯರ್ಥಿಗಳ ಪೈಕಿ ಎದ್ದು ಕಾಣುತ್ತಿರುವುದು 11 ಅತಿರಥ ಮಹಾರಥಿಗಳು.
ಕರುನಾಡು ರಣರೋಚಕ ಎಲೆಕ್ಷನ್‌ಗಳಿಗೆ ಸಾಕ್ಷಿಯಾಗುತ್ತಾ ಬಂದಿದೆ. ಕಾಂಗ್ರೆಸ್‌ನ ದಶಕಗಳ ದರ್ಬಾರ್ ನಂತರ ಜನತಾ ಪರಿವಾರದ ಆಡಳಿತ, ಸಮ್ಮಿಶ್ರ ಸರ್ಕಾರದ ಯುಗ, ನಂತರ ಬಿಜೆಪಿ ಅಬ್ಬರ. ಹೀಗೆ ಮೂರೂ ಪಕ್ಷಗಳ ರಾಜ್ಯಭಾರಕ್ಕೆ ಕರ್ನಾಟಕ ಸಾಕ್ಷಿಯಾಗಿದೆ.ಮೇ 10 ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. 224 ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಒಟ್ಟು 2,613ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಪಕ್ಷ, ಕೆಆರ್'ಎಸ್, ರೈತಸಂಘ ಸೇರಿದಂತೆ ನಾನಾ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿವೆ. ಇನ್ನು ಪಕ್ಷವೇ ಇಲ್ಲದವರು ಪಕ್ಷೇತರರಾಗಿ ಕಣದಲ್ಲಿದ್ದಾರೆ. 224 ಅಖಾಡಗಳಲ್ಲಿ ಎರಡೂವರೆ ಸಾವಿರಕ್ಕೂ ಅಭ್ಯರ್ಥಿಗಳ ಪೈಕಿ ಎದ್ದು ಕಾಣುತ್ತಿರುವುದು 11 ಅತಿರಥ ಮಹಾರಥಿಗಳು. ಇಡೀ ರಾಜ್ಯದ ಕುತೂಹಲದ ಕಣ್ಣು ನೆಟ್ಟಿರೋದು ಆ 11 ಮಂದಿಯ ಮೇಲೆ.ಕರಾವಳಿಯಿಂದ ಕೋಲಾರದವರೆಗೆ.. ಬೆಂಗಳೂರಿಂದ ಬೆಳಗಾವಿವರೆಗೆ.. ಬೀದರ್"ನಿಂದ ಚಾಮರಾಜನಗರದವರೆಗೆ.. ಹೀಗೆ ರಾಜ್ಯದ 31 ಜಿಲ್ಲೆಗಳ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಚುನಾವಣೆ ನಡೀತಾ ಇದೆ. ಆ 224 ಕ್ಷೇತ್ರಗಳಲ್ಲಿ ಒಂದಷ್ಟು ಪ್ರತಿಷ್ಠೆಯ ಆಖಾಡಗಳು. ಆ ಒಂದಷ್ಟು ಪ್ರತಿಷ್ಠೆಯ ಅಖಾಡಗಳ ಅತಿರಥ ಮಹಾರಥಿಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಎದ್ದು ಕಾಣೋದು ಆ 11 ಅಭ್ಯರ್ಥಿಗಳು. ಅಷ್ಟಕ್ಕೂ 11ರ ರಹಸ್ಯದಲ್ಲಿರುವ 11 ರಣಕಲಿಗಳು ಯಾರು ಗೊತ್ತಾ..? ಈ ವಿಡಿಯೋ ನೋಡಿ