Asianet Suvarna News Asianet Suvarna News

ಜಗತ್ತಿನ ಅತ್ಯಂತ ಹಳೇ ರಾಜಕೀಯ ಪಕ್ಷಕ್ಕೆ ಕನ್ನಡಿಗ ಅಧ್ಯಕ್ಷ, ರಬ್ಬರ್ ಸ್ಟಾಂಪ್ ಆಗ್ತಾರಾ ? ಖದರ್ ತೋರಿಸ್ತಾರಾ?

ಗಾಂಧಿ ಕುಟುಂಬ ನಿಷ್ಠನಿಗೆ  ಕೈ ಪಟ್ಟಾಭಿಷೇಕ..! ಖರ್ಗೆಗೆ ಪಟ್ಟ.. ಗಾಂಧಿ ಫ್ಯಾಮಿಲಿಯ ಹೊಸ ಆಟ..! ಗಾಂಧಿ Vs ಜಿ 23... ನಿಷ್ಠೆ ಗೆಲ್ಲುತ್ತಾ.. ಬಂಡಾಯ ಗೆಲ್ಲುತ್ತಾ..? ರಬ್ಬರ್ ಸ್ಟಾಂಪ್ ಆಗ್ತಾರಾ..? ಖದರ್ ತೋರಿಸ್ತಾರಾ..? ಎನ್ನುವ ಕುತೂಹಲವೇ ಎಲ್ಲರಲ್ಲಿ ಕಾಡಿದೆ.

ಬೆಂಗಳೂರು (ಅ.1): ಗಾಂಧಿ ಕುಟುಂಬದ ಉತ್ತರಾಧಿಕಾರಿಯಾಗಿ ಕಾಂಗ್ರೆಸ್ ಅಧಿನಾಯಕನ ಪಟ್ಟ ಏರಲಿದ್ದಾರೆ ಕನ್ನಡಿಗ. ಅಪ್ಪಟ ಪಕ್ಷ ನಿಷ್ಠ ಮಲ್ಲಿಕಾರ್ಜುನ ಖರ್ಗೆ ಪಟ್ಟಾಭಿಷೇಕಕ್ಕೆ ಸಿದ್ಧವಾಯ್ತು ವೇದಿಕೆ.. 53 ವರ್ಷಗಳ ನಂತರ ಕರ್ನಾಟಕದ ಕೈ ನಾಯಕನೊಬ್ಬನಿಗೆ ಸಿಗ್ತಿದೆ ಎಐಸಿಸಿ ಅಧ್ಯಕ್ಷ ಪಟ್ಟ. ಅಷ್ಟಕ್ಕೂ ಖರ್ಗೆಗೆ ಪಟ್ಟ ಕಟ್ಟಲು ಗಾಂಧಿ ಕುಟುಂಬ ನಿರ್ಧರಿಸಿದ್ದೇಕೆ..? ಕೈ ಕಟ್ಟಾಳು ಖರ್ಗೆ ತ್ರಿವಳಿ ಗಾಂಧಿಗಳ ಏಕೈಕ ಆಯ್ಕೆ ಆಗಿದ್ದು ಹೇಗೆ..? ಖರ್ಗೆ ಪಟ್ಟಾಭಿಷೇಕದ ಹಿಂದೆ ಅಡಗಿರೋ ಆ ರೋಚಕ ರಹಸ್ಯವೇನು?

53 ವರ್ಷಗಳ ಬಳಿಕ ಕನ್ನಡಿಗರೊಬ್ಬರು ಕಾಂಗ್ರೆಸ್‌ನ ಅಧ್ಯಕ್ಷ ಪದವಿಗೇರೋದು ಬಹುತೇಕ ನಿಶ್ಚಯವಾಗಿದೆ. ಶತಮಾನದ ಇತಿಹಾಸದ ಕಾಂಗ್ರೆಸ್‌ಗೆ ಕನ್ನಡಿಗನ ಸಾರಥ್ಯ ಅನ್ನೋದು ಹೆಮ್ಮೆಯ ವಿಚಾರ. ಆದರೆ, ಇವರನ್ನು ಆಯ್ಕೆ ಮಾಡಿರುವ ಹಿಂದೆ ಗಾಂಧಿ ಕುಟುಂಬದ ಹೊಸ ಆಟ ಅಡಗಿದೆ ಅನ್ನೋದು ಕೂಡ ಸತ್ಯ.

Congress President Election: ರಾಜ್ಯಸಭಾ ವಿಪಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ್‌ ಖರ್ಗೆ ರಾಜೀನಾಮೆ!

ಗಾಂಧಿ ಕುಟುಂಬದ ಹೊರಗಿನವರಿಗೆ  ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟುವ ತಂತ್ರ, ಖರ್ಗೆ ಪಟ್ಟಾಭಿಷೇಕ ಕೈ ಪಾಳೆಯಕ್ಕೆ ಅದೆಷ್ಟರ ಮಟ್ಟಿಗೆ ಲಾಭ ತಂದುಕೊಡಲಿದೆ ಅನ್ನೋ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ. ಕಾಂಗ್ರೆಸ್'ನಲ್ಲಿ ಖರ್ಗೆ ಪಟ್ಟಾಬಿಷೇಕಕ್ಕೆ ವೇದಿಕೆ ರೆಡಿಯಾಗಿದೆ. ಕೈ ಅಧ್ಯಕ್ಷ ಪಟ್ಟವೇರಲಿರುವ ಖರ್ಗೆಯ ಮುಂದಿರೋದು ಅಂತಿಂಥಾ ಸವಾಲಲ್ಲ... ಅದು ಮದಗಜವನ್ನು ಕಟ್ಟಿ ಹಾಕುವ ಮಹಾ ಸವಾಲು ಅವರ ಮುಂದಿದೆ.