
ಈಶ್ವರಪ್ಪ ರಾಜಕೀಯ ಜೀವನ ಮುಗಿದೇ ಹೋಯ್ತಾ? ನೇರ ಪ್ರಶ್ನೆಗಳಿಗೆ ಈಶ್ವರಪ್ಪ ನೇರಾ ನೇರ ಉತ್ತರ
ನ್ಯೂಸ್ ಅವರ್ ಸ್ಪೇಷಲ್‌ನಲ್ಲಿ ಸಮಾಜದ ಬೇರೆ ಬೇರೆ ಕ್ಷೇತ್ರಗಳನ್ನು ಪ್ರತಿನಿಧಿಸುವ ಜನರ ಪ್ರಶ್ನೆಗಳಿಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಉತ್ತರಿಸಿದ್ದಾರೆ.
ಬೆಂಗಳೂರು (ಮೇ 15): ನ್ಯೂಸ್ ಅವರ್ ಸ್ಪೇಷಲ್‌ನಲ್ಲಿ (News Hour Special) ಸಮಾಜದ ಬೇರೆ ಬೇರೆ ಕ್ಷೇತ್ರಗಳನ್ನು ಪ್ರತಿನಿಧಿಸುವ ಜನರ ಪ್ರಶ್ನೆಗಳಿಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ (K S Eshwarappa) ಉತ್ತರಿಸಿದ್ದಾರೆ. ಖಂಡತುಂಡವಾಗಿ ಮಾತನಾಡುವ ಈಶ್ವರಪ್ಪ ಮಾತು ಪ್ರತಿ ಬಾರಿಯೂ ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗುತ್ತದೆ. ಪಕ್ಷದ ಸಿದ್ಧಾಂತಗಳನ್ನು ಸಮರ್ಥನೆ ಮಾಡಿಕೊಳ್ಳುವುದರಲ್ಲಿ ಹಿಂದೆ ಮುಂದೆ ನೋಡುವ ಜಾಯಮಾನದವರಲ್ಲ ಈಶ್ವರಪ್ಪ. ಹೀಗಾಗಿಯೇ ಅವರ ಸುತ್ತಮುತ್ತ ಹತ್ತು ಹಲವಾರು ವಿವಾದಗಳು ಸುತ್ತಿಕೊಳ್ಳುತ್ತವೆ. ಈ ನಡುವೆ ಈಶ್ವರಪ್ಪರನ್ನ ಸುತ್ತಿಕೊಂಡ ಮತ್ತೊಂದು ವಿವಾದ ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ. ಇವೆಲ್ಲದರ ಬಗ್ಗೆ ನ್ಯೂಸ್ ಅವರ್ ಸ್ಪೆಷಲ್‌ನಲ್ಲಿ ಈಶ್ವರಪ್ಪ ಮಾತನಾಡಿದ್ದಾರೆ, ನೇರ ಪ್ರಶ್ನೆಗಳಿಗೆ ನೇರಾ ನೇರ ಉತ್ತರ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ಓದಿ:ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ದೆಹಲಿಗೆ ತೆರಳಲು ಉಡುಪಿ ಪೊಲೀಸರ ಟೀಂ ರೆಡಿ