BBMP ಚುನಾವಣೆ ಗೆಲ್ಲಲು ಜೆಡಿಎಸ್‌ 'ಜನತಾ ಮಿತ್ರ' ಕಾರ್ಯಕ್ರಮ, ಎಲ್ಲಾ ವಾರ್ಡ್‌ಗಳಲ್ಲೂ ಸಭೆ

ಬಿಬಿಎಂಪಿ ಚುನಾವಣೆ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮದೇ ಆದ ತಂತ್ರಗಳನ್ನು ರೂಪಿಸುತ್ತಿವೆ. ಜನತಾ ಜಲಧಾರೆ ಕಾರ್ಯಕ್ರಮ ಯಶಸ್ಸು ಕಂಡ ನಂತರ ಜೆಡಿಎಸ್‌ ಇದೀಗ ರಾಜಧಾನಿ ಬೆಂಗಳೂರು ನಗರದಲ್ಲಿ ಈ ತಿಂಗಳ 22ರಿಂದ ‘ಜನತಾ ಮಿತ್ರ’ ಎಂಬ ವಿನೂತನ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ.

First Published Jun 17, 2022, 12:04 PM IST | Last Updated Jun 17, 2022, 12:07 PM IST

ಬೆಂಗಳೂರು (ಜೂ. 17): ಬಿಬಿಎಂಪಿ ಚುನಾವಣೆ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮದೇ ಆದ ತಂತ್ರಗಳನ್ನು ರೂಪಿಸುತ್ತಿವೆ. ಜನತಾ ಜಲಧಾರೆ ಕಾರ್ಯಕ್ರಮ ಯಶಸ್ಸು ಕಂಡ ನಂತರ ಜೆಡಿಎಸ್‌ ಇದೀಗ ರಾಜಧಾನಿ ಬೆಂಗಳೂರು ನಗರದಲ್ಲಿ ಈ ತಿಂಗಳ 22ರಿಂದ ‘ಜನತಾ ಮಿತ್ರ’ (Janata Mitra) ಎಂಬ ವಿನೂತನ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ.

ಬಿಜೆಪಿ ವೈಫಲ್ಯಗಳೇ ಅಸ್ತ್ರ, BBMP ಅಧಿಕಾರ ಹಿಡಿಯಲು ಕಾಂಗ್ರೆಸ್ ತಂತ್ರ ಇದು!

ಬೆಂಗಳೂರು ನಗರದಲ್ಲಿರುವ ಸಮಸ್ಯೆಗಳ ಬಗ್ಗೆ ಅರಿಯಲು ಮತ್ತು ಜನಾಭಿಪ್ರಾಯ ಮೂಡಿಸಲು ಜನತಾ ಸೇವಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಜೂ.22ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಜನತಾ ಸೇವಕ ಎಂಬ ವಾಹನದ ಮೂಲಕ ಬೆಂಗಳೂರು ಪ್ರವಾಸ ಮಾಡಲಾಗುತ್ತದೆ. 15 ವಾಹನಗಳು ನಗರದ ಗಲ್ಲಿ, ಗಲ್ಲಿಗೂ ಹೋಗುತ್ತವೆ. ಜನರಿಗೆ ನಾವೇನು ಕೊಡುತ್ತಿದ್ದೇವೆ. ರಾಷ್ಟ್ರೀಯ ಪಕ್ಷಗಳು ಲೂಟಿ ಮಾಡುತ್ತಿರುವ ಬಗ್ಗೆ ತಿಳಿಸಲಾಗುವುದು.