ದೇವೇಗೌಡರ ಕುಟುಂಬಕ್ಕೆ ರೆಬಲ್ಸ್ ಕಾಟ: ಗೌಡರ ಗರಡಿಯಲ್ಲಿ ಪಳಗಿದವರೇ ಬಂಡೇಳೋದ್ಯಾಕೆ..?

ಇದು ದಳಪತಿಗಳ ವಿರುದ್ಧ ದಂಡು ಕಟ್ಟಿ ಬಂಡೆದ್ದು ನಿಂತ ರೆಬಲ್'ಗಳ ಕಥೆ. ಗೌಡರ ಕುಟುಂಬದ ವಿರುದ್ಧ ತೊಡೆ ತಟ್ಟಿ ನಿಂತ ರೆಬಲ್'ಸ್ಟಾರ್'ಗಳ ಕಥೆ.

Share this Video
  • FB
  • Linkdin
  • Whatsapp

ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಒಂದು ಕಡೆ ಮಾಜಿ ಸಿಎಂ ಕುಮಾರಸ್ವಾಮಿ ಪಂಚರತ್ನ ಯಾತ್ರೆಯಲ್ಲಿ ಬ್ಯುಸಿಯಾಗಿದ್ದು, ಜೆಡಿಎಸ್‌ ಅನ್ನು ಏಕಾಂಗಿಯಾಗಿ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇನ್ನೊಂದೆಡೆ, ಗೌಡರು ಹಾಗೂ ಕುಟುಂಬದ ವಿರುದ್ಧ ತೊಡೆ ತಟ್ಟಿ ಪಕ್ಷದ ವಿರುದ್ಧವೇ ತೊಡೆ ತಟ್ಟುತ್ತಿದ್ದು, ಬೇರೆ ಪಕ್ಷದ ಪಾಲಾಗುತ್ತಿದ್ದಾರೆ. ಇದು ದಳಪತಿಗಳ ವಿರುದ್ಧ ದಂಡು ಕಟ್ಟಿ ಬಂಡೆದ್ದು ನಿಂತ ರೆಬಲ್'ಗಳ ಕಥೆ. ಗೌಡರ ಕುಟುಂಬದ ವಿರುದ್ಧ ತೊಡೆ ತಟ್ಟಿ ನಿಂತ ರೆಬಲ್'ಸ್ಟಾರ್'ಗಳ ಕಥೆ. ದೇವೇಗೌಡರ ವಿರುದ್ಧ ತಿರುಗಿ ಬಿದ್ದವರು ಒಂದಷ್ಟು ಮಂದಿಯಾದ್ರೆ, ಮತ್ತೊಂದಷ್ಟು ಮಂದಿಗೆ ಕುಮಾರಸ್ವಾಮಿ ವಿರುದ್ಧ ಕೋಪ. ಅಷ್ಟಕ್ಕೂ ರಾಜ್ಯ ರಾಜಕಾರಣದ ದೊಡ್ಮನೆ ವಿರುದ್ಧ ರೆಬಲ್'ಗಳಾಗಿದ್ದು ಯಾರು ಮತ್ತು ಎಷ್ಟು ಮಂದಿ. ಯಾಕೆ ಅಂತೀರಾ..? ಸುವರ್ಣ ಸ್ಪೆಷಲ್‌ನಲ್ಲಿದೆ ಉತ್ತರ..

Related Video