ಸರ್ಕಾರ ಬೀಳಿಸಲ್ಲ ಎನ್ನುವ HDK ಓಪನ್ ಸ್ಟೇಟ್​ಮೆಂಟ್: ಮದುವೆ ಮನೆಯಲ್ಲಾಯ್ತು ಕಮಿಟ್‌ಮೆಂಟ್‌

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ತಾಳಿರುವುದನ್ನು ಗಮನಿಸಿದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಂತಿದೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನುಡಿದಿದ್ದ ಭವಿಷ್ಯ ಅದ್ಯಾಕೋ ನಿಜವೆನಿಸುತ್ತಿದೆ.

First Published Nov 1, 2019, 6:10 PM IST | Last Updated Nov 1, 2019, 6:10 PM IST

ಬೆಂಗಳೂರು, [ನ.01]: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ತಾಳಿರುವುದನ್ನು ಗಮನಿಸಿದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಂತಿದೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನುಡಿದಿದ್ದ ಭವಿಷ್ಯ ಅದ್ಯಾಕೋ ನಿಜವೆನಿಸುವಂತಿದೆ.

ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ: ಎಚ್‌ಡಿಕೆ ಅಚ್ಚರಿ ಹೇಳಿಕೆ!

ಹೌದು...ಉಪಚುನಾವಣೆ ಬಳಿಕ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದ್ದು, ನಿಗದಿಗಿಂತ ಕಡಿಮೆ ಸ್ಥಾನ ಬಂದ್ರೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಸರ್ಕಾರ ಮುಂದುವರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. 

ಇದಕ್ಕೆ ಪೂರಕವೆಂಬಂತೆ ಮದುವೆ ಮನೆಯಲ್ಲಿ ಹಾಲಿ ಸಿಎಂ  ಹಾಗೂ ಮಾಜಿ ಸಿಎಂ ಮುಖಾಮುಖಿ ಭೇಟಿಯಾಗಿದ್ದು, ತಮಾಷೆಯಲ್ಲಿಯೇ ಉಭಯ ನಾಯಕರು ಮೈತ್ರಿಗೆ ಸಕರಾತ್ಮಕವಾಗಿ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. 

ಬಿಜೆಪಿ ಸರ್ಕಾರ ಉರುಳಲು ಬಿಡಲ್ಲ ಎಂದ ಕುಮಾರಸ್ವಾಮಿಗೆ ಬಿಎಸ್‌ವೈ ಅಭಿನಂದನೆ

ಹಾಗಾದ್ರೆ ಉಭಯ ನಾಯಕರ ಭೇಟಿ ವೇಳೆ ಏನೆಲ್ಲ ಆಯ್ತು..? ರಾಜ್ಯ ರಾಜಕಾರಣದಲ್ಲಿ ಏನೆಲ್ಲ ಆಗ್ಬಹುದು ಎನ್ನುವುದನ್ನು ನಮ್ಮ Special Operation Editor ಅವಿನಾಶ್ ವಿಶ್ಲೇಷಣಾತ್ಮಕವಾಗಿ ವಿವರಿಸಿದ್ದು, ಅದನ್ನು ವಿಡಿಯೋನಲ್ಲಿ ನೋಡಿ.