Panchamasali Reservation: ಕೇಂದ್ರ ಭರವಸೆ ನೀಡಿದರೆ ಪ್ರತಿಭಟನೆ ವಾಪಸ್: ಜಯ ಮೃತ್ಯುಂಜಯ ಶ್ರೀಗಳು

ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣೆಯ ಹೊಸ್ತಿಲಲ್ಲಿ 2A ಮೀಸಲಾತಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ.

Share this Video
  • FB
  • Linkdin
  • Whatsapp

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಘೋಷಣೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಮೀಸಲಾತಿ ವಿಷಯದಲ್ಲಿ ಸರ್ಕಾರದ ನಡೆಗೆ ಜಯ ಮೃತ್ಯುಂಜಯ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ. ಪಂಚಮಸಾಲಿ ಸಮುದಾಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಎಸ್‌ವೈ ಅವರನ್ನು ನಂಬಿ ಬಿಜೆಪಿಗೆ ಮತ ನೀಡಿದ್ದೇವೆ. ಸಿಎಂ ಬೊಮ್ಮಾಯಿ ಜತೆ ಮಾತುಕತೆ ಇಷ್ಟ ಇಲ್ಲ ಎಂದು ರಾಜ್ಯ ಸರ್ಕಾರಕ್ಕೆ ಜಯ ಮೃತ್ಯುಂಜಯ ಶ್ರೀಗಳು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಮಧ್ಯಸ್ಥಿಕೆ ವಹಿಸಿ ಭರವಸೆ ನೀಡಿದ್ರಷ್ಟೇ ಪ್ರತಿಭಟನೆ ವಾಪಸ್ಸು ಪಡೆಯುವುದಾಗಿ ಅವರು ತಿಳಿಸಿದ್ದಾರೆ.

Related Video