'ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಶತಸಿದ್ಧ..' ಎಂದ ಜೈನ ಮಹಾಮುನಿ

ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್‌ಗೆ ಸನ್ಯಾಸಿಗಳ ಬೆಂಬಲ ದೊರೆತಿದೆ. ಹೈಕಮಾಂಡ್‌ನ ನಿರ್ಧಾರವೇ ಅಂತಿಮವಾಗಿದ್ದು, ಡಿಕೆಶಿಗೆ ಸಿಂಹಾಸನ ಒಲಿಯುವುದೇ ಎಂಬ ಕುತೂಹಲ ಮನೆ ಮಾಡಿದೆ.

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ಪಣ ತೊಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಭಾರೀ ಅಡ್ಡಗಾಲು ಎದುರಾಗುತ್ತಿವೆ. ಪಟ್ಟದಾಸೆಗೆ ಸನ್ಯಾಸಿ ಶಕ್ತಿ. ಇದು ಡಿಕೆ ಶಿವಕುಮಾರ್ ಅವ್ರಿಗೆ ಸಿಕ್ಕಿರೋ ಮಹಾಮುನಿ ಶಕ್ತಿ, ಸಂತಬಲ.. ತುಂಬಿದ ವೇದಿಕೆಯಲ್ಲೇ ಡಿಕೆಶಿ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದರು ಆ ದಿಗಂಬರ ಮುನಿ..

ಯೆತ್ತಿ ಆಶೀರ್ವದಿಸಿದ ಜೈನಮುನಿಗಳು. ಶಿವ ಶಕ್ತಿಯ ನಂತರ ಡಿಕೆಗೆ ಸಂತ ಶಕ್ತಿ. ಬಂಡೆ ಸುತ್ತ ರಾಜಕೀಯ ಚಕ್ರವ್ಯೂಹ, ಬಂಡೆಗೆ ಧರ್ಮಗುರುಗಳ ಅಭಯ. ಹಾಗಾದರೆ ಡಿ.ಕೆ. ಶಿವಕುಮಾರ್ ಅವರಿಗೆ ಸಿಕ್ಕಿರೋ ಈ ಸನ್ಯಾಸಿ ಶಕ್ತಿ ಅವರನ್ನು ರಾಜಪಟ್ಟದ ಮೇಲೆ ಕೂರಿಸುತ್ತಾ.? ಬಂಡೆ ಆರಂಭಿಸಿರೋ ಸಿಂಹಾಸನ ಯಜ್ಞಕ್ಕೆ ಹೈಕಮಾಂಡ್ ವರ ಸಿಗುತ್ತಾ.? ಹಾಗೂ ಇತಿಹಾಸದ ಆ ಎರಡು ಘಟನೆಗಳು ಮರುಕಳಿಸುತ್ತದೆ ಎಂದು ಡಿ.ಕೆ. ಶಿವಕುಮಾರ್ ದೃಢವಾಗಿ ನಂಬಿರೋದು ಯಾಕೆ? ಹಾಗೂ ಆ ಇತಿಹಾಸವೇನು ಎಂಬ ಅಸಲಿ ಸತ್ಯಾಂಶ ಇಲ್ಲಿದೆ ನೋಡಿ..

ಕಾಂಗ್ರೆಸ್‌ನಲ್ಲಿ ಶುರುವಾಗಿರೋದು ಪಟ್ಟದ ಆಟ. ಆ ಆಟದಲ್ಲಿ ಒಬ್ಬೊಬ್ಬರದ್ದು ಒಂದೊಂದು ದಾಳ. ಸಿಂಹಾಸನಕ್ಕಾಗಿ ಹೈಕಮಾಂಡ್ ಮೇಲೆ ನಂಬಿಕೆ ಇಟ್ಟಿರೋ ಡಿಕೆ ಶಿವಕುಮಾರ್ ಅವರ ಬೆನ್ನಿಗೆ ಸನ್ಯಾಸಿ ಶಕ್ತಿಯೇ ನಿಂತಿದೆ. ಈ ಶಕ್ತಿಯಿಂದ ರಾಜಕೀಯ ಲೆಕ್ಕಾಚಾರಗಳೇನೂ ಬದಲಾಗಲು ಸಾಧ್ಯವಿಲ್ಲ. ಈ ಲೆಕ್ಕಾಚಾರಗಳೆಲ್ಲಾ ಅಡಗಿರೋದು ಹೈಕಮಾಂಡ್ ಕೈಯಲ್ಲಿ. ಹಾಗಾದರೆ ಡಿಕೆಶಿ ಅವ್ರಿಗೆ ಹೈಕಮಾಂಡ್ ಕೃಪೆ ತೋರುತ್ತಾ ಎಂಬುದು ಭಾರೀ ಕುತೂಹಲ ಮೂಡಿಸಿದೆ. 

Related Video