Asianet Suvarna News Asianet Suvarna News

“ಧರ್ಮಸಂಕಟ” ಪಶ್ಚಾತ್ತಾಪವಲ್ಲ...ಯುದ್ಧ ಗೆಲ್ಲುವ ರಣತಂತ್ರ!?

ರಂಭಾಪುರಿ ಮಠಕ್ಕೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯನವರ ಕೊರಳಿಗೆ ಕಾಶಿ ರುದ್ರಾಕ್ಷಿ ಮಾಲೆ ಹಾಕಿದ್ದಾರೆ ರಂಭಾಪುರಿ ಶ್ರೀಗಳು. ಮಾಲೆಧಾರಣೆಯ ನಂತರ, ಲಿಂಗಾಯತ ಧರ್ಮ ಒಡೆದ ವಿಚಾರದಲ್ಲಿ ರಂಭಾಪುರಿ ಶ್ರೀಗಳ ಸಮ್ಮುಖದಲ್ಲಿ ಸಿದ್ದರಾಮಯ್ಯ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ. ಹಾಗಾದ್ರೆ ಸಿದ್ದು ಹೆಣೆದಿರೋ ಲಿಂಗಾಯತ ವ್ಯೂಹ ವರ್ಕೌಟ್ ಆಗಲಿದ್ಯಾ..?  

First Published Aug 21, 2022, 2:21 PM IST | Last Updated Aug 21, 2022, 2:21 PM IST

ಬೆಂಗಳೂರು.(ಆಗಸ್ಟ್. 21): ರಂಭಾಪುರಿ ಮಠಕ್ಕೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯನವರ ಕೊರಳಿಗೆ ಕಾಶಿ ರುದ್ರಾಕ್ಷಿ ಮಾಲೆ ಹಾಕಿದ್ದಾರೆ ರಂಭಾಪುರಿ ಶ್ರೀಗಳು. ಮಾಲೆಧಾರಣೆಯ ನಂತರ, ಲಿಂಗಾಯತ ಧರ್ಮ ಒಡೆದ ವಿಚಾರದಲ್ಲಿ ರಂಭಾಪುರಿ ಶ್ರೀಗಳ ಸಮ್ಮುಖದಲ್ಲಿ ಸಿದ್ದರಾಮಯ್ಯ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ. ಹಾಗಾದ್ರೆ ಸಿದ್ದು ಹೆಣೆದಿರೋ ಲಿಂಗಾಯತ ವ್ಯೂಹ ವರ್ಕೌಟ್ ಆಗಲಿದ್ಯಾ..?  ಲಿಂಗಾಯತ ಮತಗಳನ್ನು ಕಾಂಗ್ರೆಸ್'ನತ್ತ ಎಳೆದು ತರೋ ಶಕ್ತಿ ಸಿದ್ದರಾಮಯ್ಯನವರ ಪಶ್ಚಾತ್ತಾಪದ ಮಾತುಗಳಿಗಿವೆಯಾ..? ರಂಭಾಪುರಿ ಶ್ರೀಗಳು ಸಿದ್ದರಾಮಯ್ಯನವರಿಗೆ ನೀಡಿದ ರುದ್ರಾಕ್ಷಿ ಮಾಲೆಯ ಮಹತ್ವ ಎಂಥದ್ದು..? 

ಸಿದ್ದು ಪಶ್ಚಾತ್ತಾಪ ಪಟ್ಟಿದ್ದರೂ ಜಗತ್ತಿಗೆ ಸತ್ಯ ಗೊತ್ತಿದೆ: ಬೊಮ್ಮಾಯಿ

ಧರ್ಮದ ಕಿಚ್ಚು ಆರಿಸಲು ರಂಭಾಪುರಿಗೆ ಹೋದ್ರಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ..? ರಂಭಾಪುರಿ ಮಠಕ್ಕೆ ಸಿದ್ದು ಭೇಟಿಯ ಹಿಂದಿದೆ ರಾಜಕೀಯ ಲೆಕ್ಕಾಚಾರ. ಸಿದ್ದು  ಪಶ್ಚಾತ್ತಾಪದ ಹಿಂದೆ ಅಡಗಿದೆ ಮತಬೇಟೆಯ ರೋಚಕ ಲೆಕ್ಕ..! ಕಳಂಕ ತೊಳೆಯಲು ಹೋದ ಪ್ರತಿಪಕ್ಷ ನಾಯಕನಿಗೆ ರಂಭಾಪುರಿ ಶ್ರೀಗಳಿಂದ ಕಾಶಿ ರುದ್ರಾಕ್ಷಿ ಮಾಲೆಧಾರಣೆ..! 82ರ ವ್ಯೂಹ ಭೇದಿಸಲು ಸಿದ್ದರಾಮಯ್ಯ ಹೆಣೆದರಾ ರಾಜಕೀಯ ರಣವ್ಯೂಹ...? 82ರ ಗರ್ಭದಲ್ಲಿ  ಅಡಗಿರೋದು ಅದೆಂಥಾ ರಹಸ್ಯ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಪಶ್ಚಾತ್ತಾಪ ಅಲ್ಲ, ರಣತಂತ್ರ..! 82 ಸೀಕ್ರೆಟ್.

Video Top Stories