ಸಂವಿಧಾನಕ್ಕೆ ವಿರುದ್ಧವಾದುದ್ದೇ ಹಿಂದುತ್ವ, ಅದೇ ಮನುವಾದ: ಸಿದ್ದರಾಮಯ್ಯ

ನಾನು ಹಿಂದೂನೆ, ಹಿಂದುತ್ವ ಧರ್ಮದ ವಿರೋಧಿ ಅಲ್ಲ.
ಹಿಂದೂಧರ್ಮ ಬೇರೆ, ಹಿಂದುತ್ವ ಬೇರೆ ಆಗಿದೆ.
ಮನುವಾದ, ಹಿಂದುತ್ವದಲ್ಲಿ ಕೊಲೆ, ಹಿಂಸಾಚಾರಕ್ಕೆ ಪ್ರೋತ್ಸಾಹ

First Published Feb 6, 2023, 5:17 PM IST | Last Updated Feb 6, 2023, 5:17 PM IST

ಕಲಬುರಗಿ (ಫೆ.06): ದೇಶಕ್ಕೆ ಮನುವಾದ ಮತ್ತು ಪುರೋಹಿತಷಾಹಿ ಇವೆರಡೂ ಸಮಾಜಕ್ಕೆ ಶಾಪವಾಗಿದೆ. ಸಂವಿಧಾನಕ್ಕೆ ವಿರೋಧವಾಗಿರುವಂತದ್ದೇ ಹಿಂದುತ್ವ, ಅದನ್ನೇ ಮನುವಾದ ಅಂತ ಕರೆಯೋದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಬಗ್ಗೆ ವಿವಾದಾದ್ಮಕ ಹೇಳಿಕೆ ನೀಡಿದ್ದಾರೆ.

ಕಲಬುರಗಿ ನಗರದಲ್ಲಿ ಆಯೋಜನೆ ಮಾಡಲಾಗಿದ್ದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಜೀವನ ಕಥೆಯ "ನಿರ್ಭಯ" ಸಮಾಜವಾದದೆಡೆಗೆ ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನನ್ನನ್ನ ಹಿಂದೂ ಧರ್ಮದ ವಿರೋಧಿ ಅಂತಾರೆ. ಹಿಂದುತ್ವ ಬೇರೆ, ಹಿಂದೂ ಧರ್ಮ ಬೇರೆ ಬೇರೆಯಾಗಿದೆ. ಆದರೆ, ನಾನು ನಾನು ಹಿಂದೂ ಧರ್ಮದ ವಿರೋಧಿಯಲ್ಲ ನಾನೂ ಹಿಂದೂ ಆಗಿದ್ದೇನೆ. ಮುಖ್ಯವಾಗಿ ನಾನು ಮನುವಾದದ ವಿರೋಧಿ ಆಗಿದ್ದೇನೆ. ಹಿಂದುತ್ವದ ವಿರೋಧಿ ಆಗಿದ್ದೇನೆ. ಆದರೆ ಹಿಂದೂ ವಿರೋಧಿಯಲ್ಲ. ಯಾವುದಾದರೂ ಧರ್ಮದಲ್ಲಿ ಕೊಲೆ, ಹಿಂಸಾಚಾರಕ್ಕೆ ಅವಕಾಶ ಇದೆಯಾ? ಇಲ್ಲ. ಆದರೆ, ಮನುವಾದ, ಹಿಂದುತ್ವ ಇದೆಯಲ್ಲಾ ಅದರಲ್ಲಿ ಕೊಲೆ, ಹಿಂಸಾಚಾರಕ್ಕೆ ಪ್ರೋತ್ಸಾಹ ಕೊಡುತ್ತದೆ ಎಂದು ಹೇಳಿದ್ದಾರೆ.