ಗ್ಯಾರಂಟಿ ಯೋಜನೆಗೆ ಹೆಬ್ಬಾರ್ ಬೆಂಬಲ: ಬಿಜೆಪಿ ಟೀಕೆಗೆ ತಿರುಗೇಟು! Shivarama Hebbar on Guarantee schemes

Share this Video
  • FB
  • Linkdin
  • Whatsapp

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕಾಗಿ ಬಣ ರಾಜಕೀಯ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಶಿರಸಿಯಲ್ಲಿ ಬಿಜೆಪಿ ರೆಬೆಲ್ ಶಾಸಕ ಹಾಗೂ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯಲ್ಲಿ ಎಷ್ಟು ಬಣಗಳಿವೆ ಎಂದು ಲೆಕ್ಕ ಮಾಡುತ್ತಿದ್ದೇನೆ, ಅಂಕೆ-ಸಂಖ್ಯೆ ಸಿಕ್ಕರೆ ಹೇಳುತ್ತೇನೆ. ಬಿಜೆಪಿಯ ವ್ಯವಸ್ಥೆಯಿಂದ ಬೇಸತ್ತು ನಾನು ದೂರ ಉಳಿದಿದ್ದೇನೆ. ಸದ್ಯಕ್ಕೆ ಯಾವುದೇ ವಿವಾದಕ್ಕೆ ಬೀಳಬಾರದು ಎಂದು ಸುಮ್ಮನಿದ್ದೇನೆ. ಯಾರ್ಯಾರ ನಿಲುವು ಸರಿ, ಯಾರ್ಯಾರ ನಿಲುವು ತಪ್ಪು ಎನ್ನುವುದು ಇನ್ನು ಸ್ವಲ್ಪ ದಿನದಲ್ಲಿ ಗೊತ್ತಾಗುತ್ತದೆ. ನಾವು (ನಾನು ಮತ್ತು ಸೋಮಶೇಖರ್) ನಿರ್ಣಯ ತೆಗೆದುಕೊಂಡಾಗ ತಪ್ಪು ಎಂದು ಹೇಳಿದವರೇ ಈಗ ತಪ್ಪು ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಮತ್ತು ಯತ್ನಾಳ್ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದಾರೆ. ಶಾಸಕರ ಕ್ಷೇತ್ರಕ್ಕೆ ಅನುದಾನದ ವಿಚಾರವಾಗಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಯ ಮೇಲೆ ಪರಿಣಾಮವಾಗಿತ್ತು, ಇದೀಗ ಎಲ್ಲಾ ಸರಿಯಾಗುತ್ತಿದೆ. ಸಮಾನತೆಯ ಸಮಾಜ ನಿರ್ಮಾಣವಾಗಬೇಕು, ಇದಕ್ಕೆ ಇಂತಹ ಯೋಜನೆ ಕೊಡುವುದು ಅನಿವಾರ್ಯ ಎಂದರು. ಗ್ಯಾರಂಟಿ ಟೀಕೆ ಮಾಡಿದ ಬಿಜೆಪಿ ಮುಂಬೈ, ದೆಹಲಿಯಲ್ಲಿ ಏನು ಮಾಡಿತು ಎಂದು ಪ್ರಶ್ನಿಸಿದ್ದಾರೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video