ರಾಜಣ್ಣ ಹನಿ ಟ್ರಾಪ್ ಕೇಸ್ ಮುಗಿಸಿ ಆಯ್ತು, ರಾಜ್ಯ ಸರ್ಕಾರದ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

ರಾಜ್ಯದಲ್ಲಿ ಕಸ ವಿಲೇವಾರಿ ಕರ್ಮಾಕಾಂಡ, ಕುಮಾರಸ್ವಾಮಿ ಆರೋಪ, ಕೆಪಿಸಿಸಿ ಅಧ್ಯಕ್ಷ ರೇಸ್, ಕೆಲ ನಾಯಕರ ಕಸರತ್ತಿಗೆ ಹೈಕಮಾಂಡ್ ಫುಲ್ ಸ್ಟಾಪ್, ರಹಸ್ಯವಾಗಿ ಪ್ರಮಾಣವಚನ ಸ್ವೀಕರಿಸಿದ ಜಡ್ಜ್ ಯಶ್ವಂತ್ ವರ್ಮಾ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

Chethan Kumar  | Updated: Apr 6, 2025, 12:21 AM IST

ಸರ್ಕಾರದ ಮೇಲೆ, ಕಾಂಗ್ರೆಸ್ ವಿರುದ್ದ ಯಾವುದೇ ಆರೋಪ ಕೇಳಿಬಂದರೂ , ಪ್ರಕರಣ ದಾಖಲಾದರೂ  ಸರ್ಕಾರ ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ. ರಾಜಣ್ಣ ಹನಿ ಟ್ರ್ಯಾಪ್ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕಸ ವಿಲೇವಾರಿ ಕರ್ಮಾಂಡ ಮಾಡಿದ್ದಾರೆ. 30 ವರ್ಷಕ್ಕೆ ಲೀಸ್ ಕೊಡಲು ಸರ್ಕಾರ ಹೊರಟಿದೆ. ಇದು ಮತ್ತೊಂದು ಹಗರಣ ಎಂದು ಹೆಚ್‌ಡಿ ಕುಮಾರಸ್ವಾಮಿ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ.