ಸ್ಯಾಂಟ್ರೋ ರವಿಯನ್ನು ಸೇಫ್ ಮಾಡಲು ಸಚಿವ ಆಗರ ಜ್ಞಾನೇಂದ್ರ ಯತ್ನಿಸಿದ್ರಾ?: ಕುಮಾರಸ್ವಾಮಿ ಹೇಳಿದ್ದೇನು?
ಸ್ಯಾಂಟ್ರೋ ರವಿ ಅಹಮದಾಬಾದ್'ನಲ್ಲಿ ಬಂಧನವಾಗಿದ್ದು, ಇದೇ ಸಂದರ್ಭದಲ್ಲಿ ಗೃಹಮಂತ್ರಿ ಆಗರ ಜ್ಞಾನೇಂದ್ರ ಕೂಡಾ ಅಲ್ಲೇ ಇದ್ದದ್ದು ಕಾಕತಾಳಿಯ ಎನ್ನುವಂತೆ ಆಗಿದೆ.
ಸ್ಯಾಂಟ್ರೋ ರವಿ ಅಹಮದಾಬಾದ್'ನಲ್ಲಿ ಬಂಧನ ವಿಚಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಪ್ರೀಪ್ಲಾನ್ ಮಾಡಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು. ಸ್ಯಾಂಟ್ರೋ ರವಿಯನ್ನು ಸೇಫ್ ಮಾಡಲು ಅಹಮದಾಬಾದ್'ಗೆ ಸಚಿವ ಆಗರ ಜ್ಞಾನೇಂದ್ರ ಯಾಕೆ ಹೋಗಿರಬಾರದು?. ಪೊಲೀಸರು ಇಷ್ಟು ಹುಡುಕುತ್ತಾ ಇದ್ದರೂ, ಕರ್ನಾಟಕ ಬಿಟ್ಟು ಹೋಗಲು ಹೇಗೆ ಸಾಧ್ಯ?. ಗುಜರಾತ್ ಗಡಿ ದಾಟಲು ಸಹಾಯ ಮಾಡಿದವರು ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಇನ್ನು 11 ದಿನಗಳ ಬಳಿಕ ಸ್ಯಾಂಟ್ರೋ ರವಿ ಅರೆಸ್ಟ್ ಆಗಿದ್ದು, ಆತ ವಿಗ್ ತೆಗೆದು ಶೇವ್ ಮಾಡಿಕೊಂಡು ಓಡಾಡುತ್ತಿದ್ದ.