Asianet Suvarna News Asianet Suvarna News

ನಾನು ಕೈ ಎತ್ತಿಸಿಕೊಂಡು ಹಾಕಿಸಿಕೊಳ್ಳಲಿಲ್ಲವೇ, ಸಿದ್ದು-ಡಿಕೆಶಿಗೆ ತಿವಿದ ಕುಮಾರಸ್ವಾಮಿ

 ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಕೈ ಹಿಡಿದುಕೊಂಡು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವ್ಯಂಗ್ಯವಾಡುತ್ತಿದ್ದಾರೆ. 

Aug 4, 2022, 6:58 PM IST

ಬೆಂಗಳೂರು, (ಆಗಸ್ಟ್.04):  ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಕೈ ಹಿಡಿದುಕೊಂಡು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವ್ಯಂಗ್ಯವಾಡುತ್ತಿದ್ದಾರೆ. 

ಸಿದ್ದರಾಮಯ್ಯ- ಡಿಕೆಶಿ ನಡುವೆ ದೋಸ್ತಿ ಬೆಸೆಯಿತಾ ಸಿದ್ದರಾಮೋತ್ಸವ...?

ಇನ್ನು ಸಿದ್ದು-ಡಿಕೆಶಿ ಕೈ ಹಿಡಿದಿರುವುದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು,  ಕೈ ಎತ್ತೋದು ಕೈ ಇಳಿಸೋದು ಆಯಾಯ ಸಂದರ್ಭಕ್ಕೆ ನಡೀತಾ ಇರುತ್ತವೆ, ನನಗೂ ಮಾಡಿಲ್ಲವೇ, ಮೈತ್ರಿ ಸರ್ಕಾರ ಇದ್ದ ವೇಳೆ ನಾನು ನೋಡಿಲ್ಲವೇ..ಅದಕ್ಕೆ ನಾನು ಕೈ ಎತ್ತಿಸಿಕೊಂಡು ಹಾಕಿಸಿಕೊಳ್ಳಲಿಲ್ಲವೇ ಅವರನ್ನು ನಂಬಿ? ಎಂದಿದ್ದಾರೆ.