ಈ ದೇಶದಲ್ಲಿ RSS ಬ್ಯಾನ್ ಆಗಿದೆಯೇನ್ರಿ.? ಟಗರು ವಿರುದ್ಧ ಹಳ್ಳಿಹಕ್ಕಿ ಗುಟುರು

ಕುರುಬರ ST ಹೋರಾಟಕ್ಕೆ RSS ಬೆಂಬಲ ನೀಡಿದೆ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. 'ಈ ದೇಶದಲ್ಲಿ RSS ಬ್ಯಾನ್ ಆಗಿದೆಯಾ.? ಬ್ಯಾನ್ ಆಗಿದ್ರೆ ಆಗ ಹೇಳಿ. ಒಂದು ವೇಳೆ ಹೋರಾಟಕ್ಕೆ ಬೆಂಬಲ ನೀಡಿದ್ರೆ ಅದರಲ್ಲಿ ತಪ್ಪೇನಿಲ್ಲ' ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 13): ರಾಜ್ಯದಲ್ಲಿ ಮೀಸಲಾತಿ ಹೋರಾಟ ಸಿಎಂಗೆ ಸವಾಲಾಗಿದೆ. ಒಂದು ಸಮುದಾಯದ ಬೇಡಿಕೆ ಈಡೇರಿಸಿದರೆ, ಇನ್ನೊಂದು ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಹಾಗಾಗಿ ಸಿಎಂ ಟೆನ್ಷನ್‌ನಲ್ಲಿದ್ದಾರೆ. ಸ್ವಾಮೀಜಿಗಳ ನೇತೃತ್ವದಲ್ಲಿ ಮೀಸಲಾತಿ ಹೋರಾಟ ಸರಿಯಲ್ಲ. ಸ್ವಾಮೀಜಿಗಳಿಗೆ ಹೋರಾಟದ ನೇತೃತ್ವ ನೀಡುವುದು ಒಳ್ಳೆಯದಲ್ಲ ಎಂದು ಬಿಜೆಪಿ ಎಂಎಲ್‌ಸಿ ವಿಶ್ವನಾಥ್ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

'ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ, ಸಿಎಂ ಕುರ್ಚಿಯದ್ದೇ ಜಪ ಮಾಡ್ತಾರೆ'

ಇನ್ನು ಕುರುಬರ ST ಹೋರಾಟಕ್ಕೆ RSS ಬೆಂಬಲ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ದೇಶದಲ್ಲಿ RSS ಬ್ಯಾನ್ ಆಗಿದೆಯಾ.? ಬ್ಯಾನ್ ಆಗಿದ್ರೆ ಆಗ ಹೇಳಿ. ಒಂದು ವೇಳೆ ಹೋರಾಟಕ್ಕೆ ಬೆಂಬಲ ನೀಡಿದ್ರೆ ಅದರಲ್ಲಿ ತಪ್ಪೇನಿಲ್ಲ. RSS ಬೆಂಬಲ ನೀಡಿದೆ ಎನ್ನುವುದರಲ್ಲಿ ಸಾಕ್ಷಿಯೇನಿದೆ.? ಸಿದ್ದರಾಮಯ್ಯ ಹೇಳಿಕೆಯಲ್ಲಿ ಹುರುಳಿಲ್ಲರೀ ಎಂದು ವಿಶ್ವನಾಥ್, ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. 

Related Video